ಜಗತ್ತಿನಾದ್ಯಂತ ನೂರಾರು ಕೋಟಿ ಜನ ವಾಟ್ಸಾಪ್ ಬಳಕೆದಾರರಿದ್ದು, ಈಗದು ಬರೀ ಮೆಸೇಜಿಂಗ್ ಆ್ಯಪ್ ಆಗಿ ಉಳಿದಿರದೆ, ಜೀವನದ ಭಾಗವೇ ಆಗಿದೆ. ಅದರಲ್ಲೂ, ವಾಟ್ಸಾಪ್ ನಲ್ಲಿಯೇ ಆಡಿಯೋ ಹಾಗೂ ವೀಡಿಯೊ ಕಾಲ್ ಮಾಡಬಹುದಾದ ಕಾರಣ ಕಂಪನಿಗಳ ಆನ್‌ಲೈನ್ ಮೀಟಿಂಗ್ ಗಳು ಸಹ ವಾಟ್ಸಾಪ್ ಕಾಲ್ ಮೂಲಕವೇ ನಡೆಯುತ್ತಿವೆ.
ಆದರೆ, ಸೀಮಿತವಾಗಿ ಇಂಟರ್‌ನೆಟ್ ಪ್ಯಾಕ್ ಹಾಕಿಸಿಕೊಂಡವರಿಗೆ, ನಿಯಮಿತವಾಗಿ ಇಂಟರ್‌ನೆಟ್ ಬಳಕೆ ಮಾಡುವವರಿಗೆ ವಾಟ್ಸಾಪ್ ಕಾಲ್‌ನಿಂದಾಗಿ ಬೇಗನೆ ಮೊಬೈಲ್ ಡೇಟಾ ಮುಗಿಯುತ್ತಿದೆ. ಅದರಲ್ಲೂ, ಕೊರೊನಾ ಲಾಕ್‌ಡೌನ್, ನಿರ್ಬಂಧಗಳಿಂದಾಗಿ ವರ್ಕ್‌ಫ್ರಮ್ ಹೋಂ ಆರಂಭವಾದ ಬಳಿಕವಂತೂ ವಾಟ್ಸಾಪ್ ಕಾಲ್‌ಗಳಿಂದಾಗಿ ಮೊಬೈಲ್ ಡೇಟಾ ಬೇಗನೆ ಖಾಲಿಯಾಗುತ್ತಿದೆ. ಆದರೆ, ಹೀಗೆ ಬೇಗನೆ ಮೊಬೈಲ್ ಡೇಟಾ ಕಡಿಮೆ ಮಾಡಲೆಂದೇ ವಾಟ್ಸಾಪ್ ಹೊಸ ಫೀಚರ್ ಬಿಡುಗಡೆ ಮಾಡಿದೆ.
BIG NEWS: 76 ಕಿಮೀ ಕಡಿಮೆಯಾಗಲಿದೆ ಬೆಂಗಳೂರು –ಪುಣೆ ಅಂತರ, ಹೊಸ ಹೆದ್ದಾರಿ ನಿರ್ಮಾಣ
ಹೊಸ ಫೀಚರ್‌ನಿಂದಾಗಿ ವಾಟ್ಸಾಪ್ ಕಾಲ್‌ಗಳಿಗೆ ಕಡಿಮೆ ಡೇಟಾ ಬಳಕೆಯಾಗುತ್ತದೆ. ಇದಕ್ಕಾಗಿ ಆ್ಯಂಡ್ರಾಯ್ಡ್ ವಾಟ್ಸಾಪ್ ಬಳಕೆದಾರರು ಆ್ಯಪ್ ಓಪನ್ ಮಾಡಿ, ಸ್ಕ್ರೀನ್‌ನ ಬಲಗಡೆ ಇರುವ ಮೂರು ಡಾಟ್‌ಗಳ ಮೇಲೆ ಕ್ಲಿಕ್ ಮಾಡಬೇಕು. ನಂತರ ಸೆಟ್ಟಿಂಗ್ಸ್ ಮೆನು ಓಪನ್ ಮಾಡಿ, ಸ್ಟೋರೇಜ್ ಆ್ಯಂಡ್ ಡೇಟಾ ಆಪ್ಶನ್ ಆಯ್ಕೆ ಮಾಡಿಕೊಳ್ಳಬೇಕು.
ಇದಾದ ಬಳಿಕ ’ಯೂಸ್ ಲೆಸ್ ಡೇಟಾ ಫಾರ್ ಕಾಲ್ಸ್’ ಆಯ್ಕೆ ಮಾಡಿಕೊಂಡರೆ ಕಡಿಮೆ ಇಂಟರ್‌ನೆಟ್ ಬಳಕೆಯಾಗುತ್ತದೆ. ಈ ಸೌಲಭ್ಯ ಐಫೋನ್ ಗಳಲ್ಲಿಯೂ ಇದೆ.
ಸೆಟ್ಟಿಂಗ್ಸ್‌ಗೆ ಹೋಗಿ ಸ್ಟೋರೇಜ್ ಆ್ಯಂಡ್ ಡೇಟಾ ಆಯ್ಕೆ ಮಾಡಿಕೊಂಡು ಯೂಸ್ ‘ಲೆಸ್ ಡೇಟಾ ಫಾರ್ ಕಾಲ್ಸ್’ ಎಂಬ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಐಫೋನ್ ಬಳಕೆದಾರರು ಸಹ ಡೇಟಾ ಉಳಿಸಬಹುದಾಗಿದೆ.