ನವದೆಹಲಿ: ಭಯೋತ್ಪಾದನೆ ನಿಧಿ ವಿರುದ್ಧ ಮಹತ್ವದ ಕಾರ್ಯಾಚರಣೆ ನಡೆಸಿರುವ ರಾಷ್ಟ್ರೀಯ ತನಿಖಾ ದಳ-ಎನ್ಐಎ 5 ರಾಜ್ಯಗಳಲ್ಲಿ ದಾಳಿ ನಡೆಸಿದೆ.
ಜಮ್ಮು-ಕಾಶ್ಮೀರ, ಮಹಾರಾಷ್ಟ್ರ ಸೇರಿದಂತೆ 5 ರಾಜ್ಯಗಳಲ್ಲಿ ಎನ್ ಐಎ ದಾಳಿ ನಡೆಸಿದ್ದು, 22 ಸ್ಥಳಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿದೆ.
ದಾಳಿ ವೇಳೆ ಜೈಶ್-ಇ-ಮೊಹಮ್ಮದ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ನಾಲ್ವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಇಬ್ಬರು ಶಂಕಿತರನ್ನು ಜಲ್ನಾ ಜಿಲ್ಲೆಯಲ್ಲಿ , ಒಬ್ಬನನ್ನು ಛತ್ರಪತಿ ಸಂಭಾಜಿ ನಗರ ಹಾಗೂ ಮತ್ತೊಬ್ಬನನ್ನು ಮಾಲೆಗಾಂವ್ ನಲ್ಲಿ ಬಂಧಿಸಲಾಗಿದೆ.
ಜಮು-ಕಾಶ್ಮೀರದ ಬಾರಾಮುಲ್ಲಾ, ದೆಹಲಿ, ಉತ್ತರಪ್ರದೇಶ, ಅಸ್ಸಾಂ ಹಾಗೂ ಮಹಾರಾಷ್ಟ್ರದಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.