ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕತ್ವ, ಆಂತರಿಕ ವ್ಯವಸ್ಥೆ, ಪಕ್ಷದಲ್ಲಿನ ಬೆಳವಣಿಗೆ ಬಗ್ಗೆ ಹಿರಿಯ ನಾಯಕರ ಅಪಸ್ವರ ಮುಂದುವರೆದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಮುರಿದು ಬಿದ್ದಿರುವ ಆಂತರಿಕ ಸಂರಚನೆಯನ್ನು ಮತ್ತೆ ನಿರ್ಮಿಸಬೇಕಿದೆ ಎಂದು ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಹೇಳಿದ್ದಾರೆ. ಸಾಂಸ್ಥಿಕ ಚುನಾವಣೆಯಲ್ಲಿ ನಾಯಕರು ಗೆದ್ದು ಬಂದರೆ ಅಂತರಿಕ ಸಂರಚನೆ ಕೆಲಸ ಮಾಡುತ್ತದೆ. ನಾಯಕತ್ವ ಬದಲಾದ ಕೂಡಲೇ ನಾವು ಗೆಲ್ಲುತ್ತೇವೆ ಎಂದು ಹೇಳಲಾಗುವುದಿಲ್ಲ. ವ್ಯವಸ್ಥೆಯಲ್ಲಿ ಬದಲಾವಣೆಯಾದರೆ ಗೆಲುವು ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಕಪಿಲ್ ಸಿಬಲ್, ಚಿದಂಬರಂ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾತನಾಡಿದ ನಂತರದಲ್ಲಿ ಆಜಾದ್ ಕೂಡ ಮಾತನಾಡಿದ್ದು, ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಗೆ, ಚುನಾವಣೆಯಲ್ಲಿ ಸತತ ಸೋಲುಗಳಿಗೆ ಫೈವ್ ಸ್ಟಾರ್ ಸಂಸ್ಕೃತಿ ಕಾರಣ. ಪಕ್ಷದಲ್ಲಿನ ವ್ಯವಸ್ಥೆ ಕುಸಿದು ಬಿದ್ದಿದ್ದು, ಅದನ್ನು ಸರಿಪಡಿಸದಿದ್ದರೆ ಗೆಲುವು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಆಗಸ್ಟ್ ನಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ ಬಗ್ಗೆ ಪತ್ರ ಬರೆದಿದ್ದ ಹಿರಿಯ ನಾಯಕರಲ್ಲಿ ಗುಲಾಂ ನಬಿ ಆಜಾದ್ ಕೂಡ ಇದ್ದರು.