alex Certify ಪೊಲೀಸ್‌ ಅಧಿಕಾರಿ ಮೇಲೆ ಕೈ ಮಾಡಿದ RSS ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್‌ ಅಧಿಕಾರಿ ಮೇಲೆ ಕೈ ಮಾಡಿದ RSS ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌

ತಮಿಳುನಾಡಿನ ಕೊಯಮತ್ತೂರಿನಲ್ಲಿ ಪೊಲೀಸರ ಮೇಲೆ ಕೈ ಮಾಡಿದ ಆರೋಪದ ಮೇಲೆ ಆರ್‌.ಎಸ್‌.ಎಸ್‌.ನ ಐವರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಲ್ಲಿನ ವಿಳಾಂಕುರಿಚಿ ಎಂಬಲ್ಲಿ ಈ ಘಟನೆ ಜರುಗಿದೆ.

ಆರ್‌‌.ಎಸ್‌.ಎಸ್‌.ನ ತರಬೇತಿ ಕಾರ್ಯಕ್ರಮ ನಡೆಯುತ್ತಿದ್ದ ಖಾಸಗಿ ಶಾಲೆಯೊಂದರ ಆವರಣ ಪ್ರವೇಶಿಸಲು ಮುಂದಾದ ಕೊಯಮತ್ತೂರು ಪೊಲೀಸ್ ಮತ್ತು ಆರ್‌‌.ಎಸ್‌.ಎಸ್‌. ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ ಎಂದು ವರದಿಗಳು ತಿಳಿಸಿದೆ. ನಾಮ್ ತಮಿಳಿಯಾರ್‌ ಕಚ್ಚಿ (ಎನ್‌ಟಿಕೆ) ಹೆಸರಿನ ಸಂಘಟನೆಯೊಂದು ಆರ್‌‌.ಎಸ್‌.ಎಸ್‌. ವಿರುದ್ಧ ಪ್ರತಿಭಟನೆ ಮಾಡುವುದಾಗಿ ಬೆದರಿಕೆಯೊಡ್ಡಿದ ಬಳಿಕ ಶಾಲೆಯ ಸುತ್ತಲೂ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಶುಕ್ರವಾರ ಎನ್‌ಟಿಕೆಯ 19 ಮಂದಿ ಶಾಲೆಯ ಹೊರಗೆ ಪ್ರತಿಭಟನೆ ಮಾಡಲು ಮುಂದಾದ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾತನಾಡಿದ ಕೊಯಮತ್ತೂರು ಉತ್ತರ ವಿಭಾಗದ ಉಪ ಆಯುಕ್ತ ಟಿ ಜಯಚಂದ್ರನ್, ಪೊಲೀಸರಿಗೆ ಶಾಲೆಯ ಆವರಣದ ಒಳಗೆ ಪ್ರವೇಶಿಸುವ ಉದ್ದೇಶ ಇರಲಿಲ್ಲವೆಂದಿದ್ದು, ಆರ್‌‌.ಎಸ್‌.ಎಸ್‌. ಸದಸ್ಯರನ್ನು ಶಾಲೆಯ ಆವರಣದ ಒಳಗೆ ಇರುವಂತೆ ಕೋರಿದ್ದಾಗಿ ತಿಳಿಸಿದ್ದಾರೆ. ಆದರೆ ಇದಕ್ಕೆ ಆರ್‌‌.ಎಸ್‌.ಎಸ್‌. ಕಾರ್ಯಕರ್ತರು ಕೇಳದೇ ಇದ್ದಾಗ, ಎರಡೂ ಕಡೆಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.

ಪ್ರಕರಣ ಸಂಬಂಧ, ಪೊಲೀಸ್‌ ಅಧಿಕಾರಿ ಮೇಲೆ ಕೈ ಮಾಡಿದ ಆಪಾದನೆ ಮೇಲೆ ಆರ್‌‌.ಎಸ್‌.ಎಸ್‌. ಕಾರ್ಯಕರ್ತರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಐದು ಮಂದಿಯನ್ನು ತನಿಖೆಗೆ ಒಳಪಡಿಸಿದ್ದು, ಇನ್ನಿತರ ಶಂಕಿತರ ಗುರುತುಗಳನ್ನು ಪತ್ತೆ ಮಾಡಲು ತನಿಖೆ ಪ್ರಗತಿಯಲ್ಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...