alex Certify ʼಡಿಜಿಟಲ್ ಲೋನ್‌ʼ ಪಡೆದುಕೊಳ್ಳುವುದೆಷ್ಟು ಸೂಕ್ತ…? ಇಲ್ಲಿದೆ 5 ಪ್ರಮುಖ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡಿಜಿಟಲ್ ಲೋನ್‌ʼ ಪಡೆದುಕೊಳ್ಳುವುದೆಷ್ಟು ಸೂಕ್ತ…? ಇಲ್ಲಿದೆ 5 ಪ್ರಮುಖ ಕಾರಣ

ಕೆಳ ಹಂತದ ಆದಾಯದ ಮಂದಿಗೆ ಸಾಲ ಸೌಲಭ್ಯವನ್ನು ಸರಳವಾಗಿಸುವ ಡಿಜಿಟಲ್ ಲೋನ್‌ನ ಟ್ರೆಂಡ್ ದಿನೇ ದಿನೇ ಏರುತ್ತಲೇ ಇದೆ.

ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅನುಕೂಲವಾಗುವುದರೊಂದಿಗೆ ಅಲ್ಪಾದಾಯದ ವರ್ಗಗಳಿಗೆ ಈ ಡಿಜಿಲೋನ್ ಬಹಳ ಉಪಯುಕ್ತ ಎಂದು ಸಾರಲು ಇಲ್ಲಿವೆ ಐದು ಕಾರಣಗಳು:

1. ಅರ್ಜಿ ಸಲ್ಲಿಸಲು ಸರಳ ಪ್ರಕ್ರಿಯೆ

ಸಾಮಾನ್ಯವಾಗಿ ಲೋನ್ ಪಡೆಯಲು ದಾಖಲೆಗಳ ಸಲ್ಲಿಕೆಯಿಂದ ಬ್ಯಾಂಕುಗಳಲ್ಲಿ ಒಪ್ಪಿಗೆ ಪಡೆಯಲು ಸುದೀರ್ಘವಾದ ಪ್ರಕ್ರಿಯೆಗಳನ್ನು ಹಾದು ಬರಬೇಕು. ಆದರೆ ಡಿಜಿಟಲ್ ಪ್ಲಾಟ್‌ಫಾರಂಗಳಲ್ಲಿ ಡೇಟಾ ಎಂಟ್ರಿ ಪ್ರಕ್ರಿಯೆಗಳು ತ್ವರಿತವಾಗಿ ಆಗುವುದಲ್ಲದೇ, ಮಾನವ ಸಹಜ ಲೋಪಗಳ ರಿಸ್ಕ್ ಇನ್ನಷ್ಟು ಕಡಿಮೆ ಇರುತ್ತದೆ.

ಅಲ್ಲದೇ ದಾಖಲೆಗಳ ಪರಿಶೀಲನೆಯನ್ನು ದೈಹಿಕವಾಗಿ ಮಾಡಬೇಕಾದ ಅಗತ್ಯವಿಲ್ಲದ ಕಾರಣ, ಸ್ಕ್ಯಾನ್‌ ಮಾಡಲಾದ ದಾಖಲೆಗಳ ಅಪ್ಲೋಡಿಂಗ್ ಈಗ ಇನ್ನಷ್ಟು ಮುಖ್ಯವಾಹಿನಿಗೆ ಬಂದಿದ್ದು, ಸಾಲ ಪಡೆಯುವವರು ಹಾಗೂ ಕೊಡುವವರಿಗೂ ಅನುಕೂಲವಾಗಿದೆ.

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಸೆ. 10 ರ ವರೆಗೆ ಇ-ಕೆವೈಸಿ ಅವಧಿ ವಿಸ್ತರಣೆ

2. ಸಾಲ ಪಡೆಯುವ ಅರ್ಹತೆಗಳಲ್ಲಿ ಸಡಿಲಿಕೆ

ಸಾಂಪ್ರದಾಯಿಕ ಸಾಲ ನೀಡುವ ಪ್ರಕ್ರಿಯೆಯಲ್ಲಿ ಸಾಲಗಾರರು ತಮ್ಮ ಉದ್ಯೋಗದ ಇತಿಹಾಸ, ಮನೆಯ ಸಾಕ್ಷ್ಯ, ಸಂಬಳದ ಸಾಕ್ಷ್ಯ, ಆಸ್ತಿ ವಿವರಗಳನ್ನೆಲ್ಲಾ ಕೊಡಬೇಕಿತ್ತು. ಇವುಗಳಲ್ಲಿ ಕೆಲವೊಂದು ಮೂಲ ಅರ್ಹತೆಗಳು ಅತ್ಯಗತ್ಯವಾದರೂ ಸಹ ಮಿಕ್ಕ ಅರ್ಹತೆಗಳು ಕ್ರೆಡಿಟ್‌ಗೆ ಹೊಸಬರಾದ ಯುವಕರಿಗೆ ಅಡಚಣೆ ಎನಿಸುತ್ತವೆ.

ಡಿಜಿಲೋನ್‌ದಾರರು ಸಾಲಗಾರರ ಇತರೆ ಅರ್ಹತೆಗಳಾದ ಸಾಮಾಜಿಕ ಜಾಲತಾಣದ ಇತಿಹಾಸ, ಆನ್ಲೈನ್ ವೆಚ್ಚಗಳು, ಸಂಚಾರದ ಇತಿಹಾಸಗಳಂಥ ವಿವರಗಳ ಮೇಲೆ ಕ್ರೆಡಿಟ್‌‌ ಮೌಲ್ಯಮಾಪನ ಮಾಡುತ್ತಾರೆ. ಹೀಗಾಗಿ ಆರ್ಥಿಕ ಸ್ಥಿರತೆ ಇರುವ ಮಂದಿಗೆ ಮಾತ್ರವಲ್ಲದೇ, ಭದ್ರ ನೆಲೆ ಕಟ್ಟಿಕೊಳ್ಳಲು ನೋಡುತ್ತಿರುವ ಮಂದಿಗೂ ಇದರಿಂದ ಅನುಕೂಲವಾಗಲಿದೆ.

3. ಫ್ಲೆಕ್ಸಿಬಲ್ ಪಾವತಿ ಆಯ್ಕೆಗಳು

ಡಿಜಿಟಲ್ ಸಾಲದ ಮೂಲಕ ವೇತನದಾರರಂತ ಸಾಲಗಾರರು ಐದು ಲಕ್ಷ ರೂಪಾಯಿಗಳಷ್ಟು ಮೊತ್ತವನ್ನು ಫ್ಲೆಕ್ಸಿಬಲ್ ಕ್ರೆಡಿಟ್ ಮೂಲಕ ಪಡೆಯಬಹುದಾಗಿದೆ. ದೊಡ್ಡ ಬ್ಯಾಂಕುಗಳಲ್ಲಿ ಇಷ್ಟು ಮೊತ್ತವನ್ನು ದೊಡ್ಡ ರಿಸ್ಕ್‌ ಸಾಲವೆಂದು ಪರಿಗಣಿಸಲಾಗುತ್ತದೆ.

ಆದರೆ ಡಿಜಿಸಾಲಗಾರರು ಇವನ್ನೆಲ್ಲಾ ಸಣ್ಣಪುಟ್ಟ ಸಾಲಗಳೆಂದು ಪರಿಗಣಿಸುತ್ತಾರೆ. ಈ ಸಾಲಗಳ ಮರುಪಾವತಿಯ ಕಂತುಗಳನ್ನು ಕೆಲವೇ ತಿಂಗಳುಗಳಿಂದ 2.5 ವರ್ಷಗಳವರೆಗೂ ವಿಸ್ತರಿಸಬಹುದಾಗಿದೆ. ಇದರಿಂದಾಗಿ ಸಣ್ಣ ವರ್ತಕರು, ಹಾಗೂ ವೈಯಕ್ತಿಕ ಸಾಲದ ಅಗತ್ಯ ಇರುವ ಮಂದಿಗೆ ಭಾರೀ ಅನುಕೂಲವಾಗಲಿದೆ.

4. ಸಾಲ ಕೊಡುವವರಿಗೆ ಅನುಕೂಲಕರ

ಡಿಜಿಲೋನ್‌ಗಳು ಕೇವಲ ಸಾಲಗಾರರಿಗೆ ಮಾತ್ರವಲ್ಲದೇ ಲೇವಾದೇವಿದಾರರಿಗೂ ಉಪಯುಕ್ತವಾಗಲಿವೆ. ಸಾಲ ಚುಕ್ತಾ ಮಾಡುವ ಪ್ರಕ್ರಿಯೆಗಳೆಲ್ಲವನ್ನೂ ಡಿಜಿಟಲೀಕರಣ ಮಾಡಿರುವ ಕಾರಣ ಲಭ್ಯವಿರುವ ಮಾನವ ಸಂಪನ್ಮೂಲವನ್ನು ಗ್ರಾಹಕರೊಂದಿಗೆ ಸಂಬಂಧ ಸುಧಾರಿಸಲು ಕೇಂದ್ರೀಕರಿಸಬಹುದಾಗಿದೆ.

5. ತ್ವರಿತ ನಿರ್ಣಯಕ್ಕೆ ಅವಕಾಶ

ಕ್ಲೌಡ್ ಕಂಪ್ಯೂಟಿಂಗ್, ಇಮೇಜಿಂಗ್‌ ಹಾಗೂ ಅನಲಿಟಿಕ್ಸ್‌ನಂಥ ತಂತ್ರಜ್ಞಾನದಿಂದಾಗಿ ಅರ್ಜಿ ಸಲ್ಲಿಸುವಿಕೆಯಿಂದ ದಾಖಲೆಗಳ ನಿರ್ವಹಣೆಯನ್ನು ಹಿಡಿದು ಎಲೆಕ್ಟ್ರಾನಿಕ್ ಸಹಿಗಳು ಹಾಗೂ ಕ್ರೆಡಿಟ್ ವಿಶ್ಲೇಷಣೆವರೆಗೂ ಪ್ರತಿಯೊಂದು ಕ್ರಿಯೆಯೂ ಸರಳಗೊಂದು ಸಾಲವನ್ನು ತ್ವರಿತವಾಗಿ ವಿತರಣೆ ಮಾಡಬಹುದಾಗಿದೆ.

50 ಕೋಟಿಯಷ್ಟು ಅಂತರ್ಜಾಲ ಬಳಕೆದಾರರಿರುವ ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಕಾಲಘಟ್ಟ ನಿರ್ಮಾಣವಾಗಿದ್ದು, ಆರ್ಥಿಕ ಒಳಗೊಳ್ಳುವಿಕೆಯ ಆಶಯದ ಜನ್‌ಧನ್ ಯೋಜನೆಗಳಂಥ ಸರ್ಕಾರದ ಕ್ರಮಗಳು ದೇಶದ ವಯಸ್ಕ ಸಮೂಹದ 80% ಮಂದಿ ಬ್ಯಾಂಕ್ ಖಾತೆ ಹೊಂದುವಂತೆ ಮಾಡಿವೆ.

ಇದರಿಂದಾಗಿ ಸಾಲದ ಸೌಲಭ್ಯವು ಇನ್ನಷ್ಟು ವ್ಯಾಪಕವಾಗುವಂತೆ ಆಗಿದ್ದು, ಮುಂಬರುವ ದಿನಗಳಲ್ಲಿ ಸಾಲ ಸೌಲಭ್ಯದಿಂದ ವಂಚಿತರಾದ ಸಮೂಹಕ್ಕೆ ಡಿಜಿಲೋನ್‌ ವರದಾನವಾಗುವ ಸಾಧ್ಯತೆ ಇದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...