alex Certify 2024ರಲ್ಲಿ ಮೊದಲ ಬಾರಿಗೆ ಟಿ-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಡಲಿದೆ ಈ 5 ರಾಷ್ಟ್ರಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2024ರಲ್ಲಿ ಮೊದಲ ಬಾರಿಗೆ ಟಿ-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಡಲಿದೆ ಈ 5 ರಾಷ್ಟ್ರಗಳು

ಟಿ-20 ವಿಶ್ವಕಪ್ 2024 ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ನಡೆಯಲಿದೆ. ಇದು ಅತ್ಯಂತ ದೊಡ್ಡ ಟಿ-20 ವಿಶ್ವಕಪ್ ಟೂರ್ನಮೆಂಟ್ ಆಗಿದ್ದು, ಸ್ಪರ್ಧೆಯಲ್ಲಿ 20 ತಂಡಗಳು ಭಾಗವಹಿಸಲಿವೆ. ಈ ಬಾರಿ, ಐಸಿಸಿ ರೌಂಡ್ 1 ವ್ಯವಸ್ಥೆಯನ್ನು ತೆಗೆದುಹಾಕಿದೆ. ಇದರಲ್ಲಿ ಸೂಪರ್ 12 ಸ್ಥಾನಕ್ಕಾಗಿ ಎಂಟು ತಂಡಗಳು ಪರಸ್ಪರರ ವಿರುದ್ಧ ಆಡಬೇಕಾಗಿತ್ತು.

ಮುಂದಿನ ಟಿ-20 ವಿಶ್ವಕಪ್‌ನಲ್ಲಿ, ಎಲ್ಲಾ ತಂಡಗಳು ಗ್ರೂಪ್ ಹಂತದಲ್ಲಿ ಪ್ರಾರಂಭವಾಗುತ್ತದೆ. ತಲಾ 5 ತಂಡಗಳ 4 ಗುಂಪುಗಳು ಇರಲಿವೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಸೂಪರ್ 8 ಗೆ ಮುನ್ನಡೆಯುತ್ತವೆ. ಬಳಿಕ ಸೆಮಿಫೈನಲ್ ಮತ್ತು ನಂತರ ಫೈನಲ್ ಪಂದ್ಯ ನಡೆಯಲಿದೆ. ವಿಶೇಷವೆಂದ್ರೆ ಟಿ-20 ವಿಶ್ವಕಪ್ ನಲ್ಲಿ 5 ರಾಷ್ಟ್ರಗಳು ಚೊಚ್ಚಲ ಪಂದ್ಯವನ್ನು ಆಡಲಿದೆ. ಅವು ಯಾವುವು ಇಲ್ಲಿದೆ ಮಾಹಿತಿ..

  1. ಯುಎಸ್ಎ:

ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ 2024ಕ್ಕೆ ಯುಎಸ್ಎ ಪದಾರ್ಪಣೆ ಮಾಡಲಿದೆ. ಆದರೆ, ಅಮೆರಿಕಾದ ಕ್ರಿಕೆಟ್ ತಂಡವು ಯಾವುದೇ ಅರ್ಹತಾ ಪಂದ್ಯಾವಳಿಯನ್ನು ಆಡಬೇಕಾಗಿಲ್ಲ. ಏಕೆಂದರೆ ಈ ಮೆಗಾ ಈವೆಂಟ್‌ನ ಸಹ-ಹೋಸ್ಟ್‌ಗಳಾಗಿರುವುದರಿಂದ ಇದೊಂದು ಪ್ಲಸ್ ಪಾಯಿಂಟ್ ಆಗಿದೆ.

  1. ಕೆನಡಾ:

ಐಸಿಸಿ ಈ ವರ್ಷದ ಆರಂಭದಲ್ಲಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 7 ರವರೆಗೆ ಅಮೆರಿಕದಲ್ಲಿ ಅರ್ಹತಾ ಪಂದ್ಯಾವಳಿಯನ್ನು ಆಯೋಜಿಸಿತ್ತು. ಇದರಲ್ಲಿ ಕೆನಡಾದ ಕ್ರಿಕೆಟ್ ತಂಡವು ಅದ್ಭುತ ಪ್ರದರ್ಶನ ನೀಡಿತು. ಈ ಮೂಲಕ ತಮ್ಮ ದೇಶದಿಂದ ಅರ್ಹತೆ ಪಡೆಯುವ ತಂಡವಾಗಿ ಹೊರಹೊಮ್ಮಿತು.

  1. ನೇಪಾಳ:

ನೇಪಾಳವು 2014ರ ಟಿ-20 ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಆಡಿತ್ತು. ಆದರೆ, ಅದು ಎಂದಿಗೂ ಮುಖ್ಯ ಸುತ್ತಿನಲ್ಲಿ ಆಡಿರಲಿಲ್ಲ. ಈ ಬಾರಿ ನೇಪಾಳ ಮೆಗಾ ಈವೆಂಟ್‌ನ ಮುಖ್ಯ ಸುತ್ತಿಗೆ ಅರ್ಹತೆ ಪಡೆದಿದೆ.

  1. ಪಪುವಾ ನ್ಯೂಗಿನಿಯಾ:

ಪಪುವಾ ನ್ಯೂಗಿನಿ 2021 ರಲ್ಲಿ ಟಿ-20 ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಆಡಿತ್ತು. ಆದರೆ, ಈ ತಂಡ ಮುಖ್ಯ ಸುತ್ತಿಗೆ ಮುನ್ನಡೆಯಲು ಸಾಧ್ಯವಾಗಲಿಲ್ಲ. 2024ರ ವಿಶ್ವಕಪ್ ನಲ್ಲಿ, ಈ ತಂಡ ನೇರವಾಗಿ ಮುಖ್ಯ ಸುತ್ತಿನಲ್ಲಿ ಆಡಲಿದೆ.

  1. ಒಮಾನ್:

ಒಮಾನ್ 2021 ರಲ್ಲಿ ಟಿ-20 ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿಯೂ ಆಡಿದೆ. 2021 ರಲ್ಲಿ ಮುಖ್ಯ ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೆ, 2024ರಲ್ಲಿ ಆಡಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...