ನವದೆಹಲಿ: ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರ 5 ತಿಂಗಳ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ಡಿವಿಡೆಂಡ್ ಮೂಲಕ 4.2 ಕೋಟಿ ರೂಪಾಯಿ ಬಂದಿದೆ. ಇದು ಆ ಮಗುವಿನ ಮೊದಲ ಸಂಪಾದನೆಯಾಗಿದೆ.
ನಾರಾಯಣ ಮೂರ್ತಿ ಅವರ ಮಗ ರೋಹನ್ ಮೂರ್ತಿ ಮತ್ತು ಅಪರ್ಣ ಕೃಷ್ಣನ್ ದಂಪತಿಯ ಸುಪುತ್ರ ಏಕಾಗ್ರಹ ರೋಹನ್ ಮೂರ್ತಿಗೆ ಇನ್ಫೋಸಿಸ್ ಕಂಪನಿಯ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಆ ಷೇರುಗಳ ಮೌಲ್ಯ 240 ಕೋಟಿ ರೂಪಾಯಿ ಆಗಿತ್ತು. ಈ ಮೂಲಕ ಏಕಾಗ್ರಹ ದೇಶದ ಕಿರಿಯ ಕೋಟ್ಯಾಧೀಶ ವ್ಯಕ್ತಿ ಎನಿಸಿಕೊಂಡಿದ್ದ. ಇನ್ಫೋಸಿಸ್ ಕಂಪನಿ ಪ್ರತಿ ಷೇರಿಗೆ ಗುರುವಾರ 28 ರೂ. ಲಾಭಾಂಶ ಘೋಷಣೆ ಮಾಡಿದ್ದು, ಇದರಿಂದ ಏಕಾಗ್ರಹಗೆ 4.2 ಕೋಟಿ ರೂಪಾಯಿ ಬಂದಿದೆ.