ಬೆಂಗಳೂರು : ರಾಜ್ಯ ಸರ್ಕಾರ ಆ್ಯಸಿಡ್ ಸಂತ್ರಸ್ತೆಯರಿಗೆ 5 ಲಕ್ಷ ಆರ್ಥಿಕ ನೆರವು ನೀಡುತ್ತಿದ್ದು, ನೆರವು ಪಡೆಯಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜ.31 ನಾಳೆ ಕೊನೆಯ ದಿನವಾಗಿದೆ.
ಸಂತ್ರಸ್ತ ಮಹಿಳೆಯರು ಜ.31 ರೊಳಗಾಗಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, 6ನೇ ಮಹಡಿ, ಜಯನಗರ ವಾಣಿಜ್ಯ ಸಂಕೀರ್ಣ, 4ನೇ ಬ್ಲಾಕ್, ಜಯನಗರ, ಬೆಂಗಳೂರು – 560011 ಇಲ್ಲಿಗೆ ಅರ್ಜಿಗಳನ್ನು ಕಳುಹಿಸಬಹುದಾಗಿದೆ.
ಮಹಿಳೆಯರ ಮೇಲೆ ಆ್ಯಸಿಡ್ ದಾಳಿಯು ಅತ್ಯಂತ ಅಮಾನವೀಯ ಕೃತ್ಯವಾಗಿದೆ. ಕೃತ್ಯ ಎಸಗಿದವರನ್ನು ಎಷ್ಟೇ ಉಗ್ರ ಶಿಕ್ಷೆಗೆ ಗುರಿಮಾಡಿದರೂ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಟ್ಟಂತಾಗುವುದಿಲ್ಲ. ಆದರೆ ಸಂತ್ರಸ್ತೆಯ ನೋವಿಗೆ ಸ್ಪಂದಿಸುವ ಮೂಲಕ ಆಕೆಗೆ ವೈದ್ಯಕೀಯ ನೆರವು, ಆಪ್ತಸಮಾಲೋಚನೆ, ಕಾನೂನು ನೆರವು ಇತ್ಯಾದಿ ಸೌಲಭ್ಯಗಳ ಜೊತೆಗೆ ಆಕೆಗೆ ಪುನರ್ಜೀವನ ಕಟ್ಟಿಕೊಡಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಸಂತ್ರಸ್ತೆಯರಿಗೆ ರೂ. 5 ಲಕ್ಷದ ವರೆಗೆ ಆರ್ಥಿಕ ನೆರವು ನೀಡುತ್ತಿದೆ .