
ಎರಡು ಕಾರ್ ಗಳ ನಡುವೆ ಡಿಕ್ಕಿಯಾಗಿ ಐವರು ಸಾವನ್ನಪ್ಪಿದ ಘಟನೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆ ಮಕ್ತಲ್ ತಾಲೂಕಿನ ಜಕ್ಲೇರ್ ಗ್ರಾಮದ ಬಳಿ ನಡೆದಿದೆ.
ರಾಜ್ಯದ ಯಾದಗಿರಿ ಜಿಲ್ಲೆಯ ಮೂವರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರದ ಪ್ರಬೀತಾ(35), ಅಸ್ಮಿತಾ(7), ಯಾದಗಿರಿ ಜಿಲ್ಲೆ ಸೈದಾಪುರದ ಮೌಲಾಲಿ, ಖಲೀಲ್, ಬಸಮ್ಮ ಮೃತಪಟ್ಟವರು ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.