
ಮಹೀಂದ್ರಾ ಕಂಪೆನಿಯು ತನ್ನ ಐದು ಬಾಗಿಲುಗಳ ವಾಹನವನ್ನು ಪ್ರದರ್ಶಿಸಿದೆ. ಮಾರುತಿ ಜಿಮ್ನಿಯಲ್ಲಿ ಇರುವ ಹಲವಾರು ವೈಶಿಷ್ಟ್ಯಗಳನ್ನು ಈ ಹೊಸ ವಾಹನ ಮಹೀಂದ್ರಾ ಥಾರ್ ಹೊಂದಿದೆ.
ಇದು ನಿರೀಕ್ಷಿತ ವೈಶಿಷ್ಟ್ಯಗಳಲ್ಲಿ 8-ಇಂಚಿನ ಟಚ್‌ಸ್ಕ್ರೀನ್, ಆಟೋ ಎಸಿ ಮತ್ತು ಆರು ಏರ್‌ಬ್ಯಾಗ್‌ಗಳೊಂದಿಗೆ ರೋಡಿಗೆ ಇಳಿಯಲಿದೆ. ಮಹೀಂದ್ರಾದ ಇದಾಗಲೇ ಬಳಕೆಯಲ್ಲಿರುವ 3-ಡೋರ್ ಥಾರ್‌ನಂತೆಯೇ ಅದೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಐದು ಬಾಗಿಲುಗಳ ವಾಹನವೂ ಇರಲಿದೆ ಎಂದು ಕಂಪೆನಿ ಹೇಳಿದೆ.
2024 ರ ಆರಂಭದಲ್ಲಿ ರೂ. 15 ಲಕ್ಷದ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋ ರೂಂ) ಮಾರಾಟವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಎಲ್ಇಡಿ ಟೈಲ್‌ಲೈಟ್‌ಗಳು, ಬಾಡಿ ಪ್ಯಾನೆಲ್‌ಗಳು, ಅಲಾಯ್ ವೀಲ್‌ಗಳು ಮತ್ತು ರನ್ನಿಂಗ್ ಬೋರ್ಡ್‌ಗಳೊಂದಿಗೆ ಐದು ಬಾಗಿಲುಗಳ ಮಹೀಂದ್ರಾ ಕಂಡುಬಂದಿದೆ. ಇದು ಥಾರ್‌ನ ಹಾರ್ಡ್-ಟಾಪ್ ಆವೃತ್ತಿಯಂತೆ ಕಾಣಿಸುತ್ತಿದೆ. ಸ್ಥಿರವಾದ ಹಿಂಬದಿಯ ಗಾಜಿನ ಕಿಟಕಿಯನ್ನು ಈ ಹೊಸ ವಾಹನ ಹೊಂದಿದೆ.

