
ತುರ್ತು ಚಿಕಿತ್ಸೆಗಾಗಿ ರೋಗಿಯೊಬ್ಬರನ್ನು ಏರ್ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವಾಗ ಅಪಘಾತ ಸಂಭವಿಸಿ ರೋಗಿ ಸಹಿತ ಐದು ಮಂದಿ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಉತ್ತರ ನೆವಾಡದಲ್ಲಿ ಈ ದುರಂತ ನಡೆದಿದ್ದು, ಪರ್ವತ ಪ್ರದೇಶದಲ್ಲಿ ವಿಮಾನ ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಪೈಲೆಟ್, ರೋಗಿ, ಆತನ ಸಂಬಂಧಿಕ, ಫ್ಲೈಟ್ ನರ್ಸ್ ಹಾಗೂ ಫ್ಲೈಟ್ ವೈದ್ಯಕೀಯ ಸಹಾಯಕ ಸಾವನ್ನಪ್ಪಿದ್ದಾರೆ.
ತುರ್ತು ಸಂದರ್ಭಗಳಲ್ಲಿ ವಿಮಾನ ಹಾಗೂ ಹೆಲಿಕಾಪ್ಟರ್ ಮೂಲಕ ಆಂಬುಲೆನ್ಸ್ ಸೇವೆ ನೀಡುವ ಕೇರ್ ಫ್ಲೈಟ್ ಕಂಪನಿಗೆ ಸೇರಿದ ವಿಮಾನ ಇದಾಗಿದ್ದು, ಅಪಘಾತಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎಂದು ಶಂಕಿಸಲಾಗಿದೆ.