
ಸೋನಭದ್ರ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಸೋನಭದ್ರಾದಲ್ಲಿ ಭಾರೀ ಆಲಿಕಲ್ಲು ಮಳೆಯ ನೀರಲ್ಲಿ ಕೊಚ್ಚಿ ಹೋಗಿ ನಾಲ್ವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.
ಮೃತರನ್ನು ಗೀತಾದೇವಿ, ಸಂತ್ರಾ, ರಾಜಕುಮಾರಿ, ಯಶೋದಿಯಾ ಮತ್ತು ರಾಜಪತಿ ಎಂದು ಗುರುತಿಸಲಾಗಿದೆ. ಶುಕ್ರವಾರ ಮತ್ತು ಶನಿವಾರದ ಮಧ್ಯರಾತ್ರಿ ಈ ಘಟನೆ ನಡೆದಿದೆ. ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಆರು ಜನರು ಶುಕ್ರವಾರ ಸಂಜೆ ಹೊರಗೆ ಹೋಗಿದ್ದು, ಹಿಂತಿರುಗಲಿಲ್ಲ. ಗಂಟೆಗಟ್ಟಲೆ ಕಾದ ನಂತರ ಅವರ ಸಂಬಂಧಿಕರು ಪೊಲೀಸರನ್ನು ಸಂಪರ್ಕಿಸಿ ಅವರನ್ನು ಹುಡುಕಲು ಮುಂದಾದರು.
ಅವರು ನಾಪತ್ತೆಯಾದ ಮಾಹಿತಿ ಪಡೆದ ಪೊಲೀಸರ ತಂಡ ಶೋಧ ಕಾರ್ಯಾಚರಣೆ ಪ್ರಾರಂಭಿಸಿದೆ. ಶನಿವಾರ ಮುಂಜಾನೆ ನದಿಯ ದಡದಲ್ಲಿ ಮೂರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಐದನೇ ಮಹಿಳೆಯ ಶವವನ್ನು ರಾಂಪುರ ಬಾರ್ಕೋನಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆ ಮಾಡಲಾಗಿದೆ.
ಗಾರ್ಹ್ವಾ ಗ್ರಾಮದ 4 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಭಾರೀ ಮಳೆ ಸುರಿದಾಗ ಮರವನ್ನು ಸಂಗ್ರಹಿಸಲು ಹೋಗಿದ್ದಾರೆ. ಈ ಸಮಯದಲ್ಲಿ ಪರ್ವತಗಳಿಂದ ಬಂದ ಭಾರಿ ಪ್ರಮಾಣದ ಆಲಿಕಲ್ಲು ಮಳೆಯ ನೀರು ಇವರನ್ನು ಕೊಚ್ಚಿಕೊಂಡು ಹೋಗಿದೆ. ತನಿಖೆ ನಡೆಸಲಾಗಿದೆ ಎಂದು ಸೋನಭದ್ರ ಹೆಚ್ಚುವರಿ ಎಸ್ಪಿ ಕಲು ಸಿಂಗ್ ಹೇಳಿದ್ದಾರೆ.