ಮುಂಬೈ: ಹಣಕ್ಕಾಗಿ ಐದು ದಿನಗಳ ಹೆತ್ತ ಕಂದಮ್ಮನನ್ನೇ ಮಾರಾಟ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ದಂಪತಿ 1 ಲಕ್ಷ ಹಣಕ್ಕಾಗಿ ನವಜಾತ ಶಿಶುವನ್ನೇ ಮಾರಾಟ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳಿಲ್ಲದ ದಂಪತಿಗೆ 1 ಲಕ್ಷ ಹಣ ಪಡೆದು ಮಗುವನ್ನು ನೀಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಮಾನವ ಕಳ್ಳಸಾಗಣೆ ನಿಗ್ರಹ ದಳ ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಿಸಿದೆ.
ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದಿದ್ದವರು ಹಾಗೂ ಮಗುವನ್ನು ಮಾರಾಟ ಮಾಡಿದ್ದ ದಂಪತಿ ಹಾಗೂ ಮಧ್ಯಸ್ಥಿಕೆದಾರರನ್ನು ಸೇರಿ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಥಾಣೆಯ ಬದ್ಲಾಪುರ ನಿವಾಸಿಗಳಾದ ಸುನೀಲ್ ಅಲಿಯಾಸ್ ಭೋಂಡು, ದಯಾರಾಮ್ ಗಂದ್ರೆ ಹಾಗೂ ಪತ್ನಿ ಶ್ವೇತಾ, ಮಕ್ಕಳಿಲ್ಲದ ದಂಪತಿ ಪೂರ್ಣಿಮಾ ಶೆಲ್ಕೆ, ಪತಿ ಸ್ನೇಹದೀಪ್ ಧರ್ಮದಾಸ್, ಕಿರಣ್ ಇಂಗ್ಲೆ ಎಂದು ಗುರುತಿಸಲಾಗಿದೆ.