ಬೆಂಗಳೂರು : ಉದ್ಯಮಿಗೆ 5 ಕೋಟಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ನಾಳೆ ಕೋರ್ಟ್ ಗೆ ಹಾಜರುಪಡಿಸಲಾಗುತ್ತಿದೆ.
ಸಿಸಿಬಿ ಪೊಲೀಸರು ನಾಳೆ ಮಧ್ಯಾಹ್ನ 57ನೇ ACMM ಕೋರ್ಟ್ ಗೆ ಅಭಿನವ ಹಾಲಶ್ರೀಯನ್ನು ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ, ಹಾಲಶ್ರೀಯನ್ನು ವಿಮಾನದ ಮೂಲಕ ಒಡಿಶಾದ ಕಟಕ್ ನಿಂದ ಕೆಂಪೇಗೌಡ ಏರ್ ಪೋರ್ಟ್ ಗೆ ಸಿಸಿಬಿ ಪೊಲೀಸರು ಕರೆ ತಂದಿದ್ದಾರೆ. ನಂತರ ಹಲವು ಕಡೆ ಸ್ಥಳ ಮಹಜರು ನಡೆಸಿದ್ದಾರೆ. ನಾಳೆ ಕೋರ್ಟ್ ಗೆ ಹಾಜರುಪಡಿಸುವ ಸಿಸಿಬಿ ಕೆಲವು ದಿನಗಳ ಕಾಲ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಸ್ವಾಮೀಜಿ ಬಂಧನದಿಂದ ಪ್ರಕರಣದ ಬಗ್ಗೆ ಇನ್ನಷ್ಟು ಸ್ಪೋಟಕ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.