ಜಗತ್ತನ್ನು ಕಂಗೆಡಿಸಿದ್ದ ಕೋವಿಡ್ 19 ಸಾಂಕ್ರಾಮಿಕವು ದೇಶದಲ್ಲಿ ಸದ್ಯ ತಹಬದಿಗೆ ಬಂದಿದ್ದು, ವಿದೇಶಗಳು ಭಾರತೀಯರಿಗೆ ಗುಡ್ ನ್ಯೂಸ್ ನೀಡಿದೆ. ಭಾರತೀಯ ಪ್ರವಾಸಿಗರಿಗೆ ತಮ್ಮ ಗಡಿಗಳನ್ನು ಮುಕ್ತವಾಗಿ ತೆರೆದಿದೆ. ಪ್ರವಾಸಿ ವೀಸಾಗಳ ಮೂಲಕ ಲಸಿಕೆ ಪಡೆಯದಿದ್ದರೂ ಕೂಡ ಭಾರತೀಯ ಪ್ರಯಾಣಿಕರಿಗೆ ತಮ್ಮ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡಿವೆ. ಆದರೆ ಪ್ರಯಾಣಿಕರು ಕಡ್ಡಾಯವಾಗಿ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು. ಅಲ್ಲದೆ ಕೊರೋನಾ ಸುರಕ್ಷತಾ ಪ್ರೊಟೋಕಾಲ್ ಗಳು ಹಾಗೂ ಮಾರ್ಗಸೂಚಿಗಳನ್ನು ಅನುಸರಿಸಬೇಕು.
ಒಲಿಂಪಿಕ್ನಲ್ಲಿ ಪದಕ ವಂಚಿತರಾದರೂ ತಂದೆಯ ಈ ಕನಸನ್ನು ಸಾಕಾರಗೊಳಿಸಿದ ಆಶಿಷ್ ಕುಮಾರ್..!
ಐದು ದೇಶಗಳು ಲಸಿಕೆ ಪಡೆಯದ ಭಾರತೀಯರಿಗೆ ತಮ್ಮ ಗಡಿಗಳನ್ನು ತೆರೆದಿವೆ. ಅವು ಯಾವುವು ನೋಡೋಣ ಬನ್ನಿ……
1. ಮಾಲ್ಡೀವ್ಸ್:
ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮಾಲ್ಡೀವ್ಸ್ ಗೆ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡುತ್ತಾರೆ. ಭಾರತದಲ್ಲಿ ಕೊರೋನಾ 2ನೇ ಅಲೆ ತೀವ್ರವಾಗಿದ್ದಿದ್ದರಿಂದ ಭಾರತೀಯರಿಗೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಭಾರತ ಸೇರಿದಂತೆ ದಕ್ಷಿಣ ಏಷ್ಯಾ ದೇಶಗಳ ಪ್ರಯಾಣಿಕರಿಗಾಗಿ ಮಾಲ್ಡೀವ್ಸ್ ತನ್ನ ಗಡಿಗಳನ್ನು ತೆರೆದಿದೆ. ಪ್ರಯಾಣಿಕರು ದ್ವೀಪರಾಷ್ಟ್ರಕ್ಕೆ ತೆರಳುವ ಮೊದಲು ಆರ್ ಟಿಪಿಸಿಆರ್ ಟೆಸ್ಟ್ ವರದಿ ನೆಗೆಟಿವ್ ರಿಪೋರ್ಟ್ ತೋರಿಸಿದರೆ ಸಾಕು. ನೀವು ಮಾಲ್ಡೀವ್ಸ್ ಗೆ ತೆರಳಬಹುದು. ಇನ್ಯಾಕೆ ತಡ ಕಡಲತೀರಕ್ಕೆ ಹಾರಲು ನಿಮ್ಮ ಬ್ಯಾಗ್ ಗಳನ್ನು ಪ್ಯಾಕ್ ಮಾಡಿ ರೆಡಿ ಆಗಿ.
2. ರಷ್ಯಾ:
ರಷ್ಯಾ ಕೂಡ ತನ್ನ ಗಡಿಗಳನ್ನು ಭಾರತೀಯರಿಗೆ ತೆರೆದಿದೆ. ಅದಾಗ್ಯೂ ಪ್ರಯಾಣಿಕರು ದೇಶಕ್ಕೆ ಪ್ರವೇಶಿಸಲು ಹಲವಾರು ಕೋವಿಡ್ ಸಂಬಂಧಿತ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಸರಕಾರದ ಆದೇಶದ ಪ್ರವಾಸಿ ಸಂಸ್ಥೆಯಿಂದ ಆಹ್ವಾನವನ್ನು ಹೊಂದಿರಬೇಕು.
ಒಬ್ಬರ ಅಥವಾ ಇಬ್ಬರ ಪ್ರವೇಶಕ್ಕಾಗಿ 30 ದಿನಗಳವರೆಗೆ ಮಾನ್ಯವಾಗಿರುವ ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಜೊತೆಗೆ ಆರ್ ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ. ಆಗಮನದ ಮೊದಲ 72 ಗಂಟೆಗೊಳಗಾಗಿ ಪರೀಕ್ಷೆ ಮಾಡಬೇಕು.
ರಷ್ಯಾದಲ್ಲಿ ಇತ್ತೀಚಿಗೆ ಕೋವಿಡ್ ಪ್ರಕರಣ ಉಲ್ಬಣಗೊಂಡಿತ್ತು. ಹೀಗಾಗಿ ಕೋವಿಡ್ ಸಂಬಂಧಿತ ಪ್ರಯಾಣ ಮಾರ್ಗಸೂಚಿಗಳು ಯಾವುದೇ ಸಮಯದಲ್ಲಿ ಬದಲಾಗಬಹುದು.
3. ಟರ್ಕಿ:
ಭಾರತದಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ಕ್ವಾರಂಟೈನ್ ಆದ ಬಳಿಕ ಪ್ರಯಾಣಿಕರು ಕೋವಿಡ್ ಪರೀಕ್ಷೆಗೆ ಒಳಪಡಬೇಕು. ವರದಿ ನೆಗೆಟಿವ್ ಬಂದಲ್ಲಿ ಕ್ವಾರಂಟೈನ್ ಅವಧಿ ಮುಕ್ತಾಯವಾಗಲಿದೆ. ಇನ್ನು ಎಫ್ ವೈಐ, ಟರ್ಕಿಗೆ ತೆರಳಲು ವಿಮಾನ ಟಿಕೆಟ್ ಗಳ ಬೆಲೆ ಸಾಮಾನ್ಯಕ್ಕಿಂತ ದುಬಾರಿಯಾಗಿದೆ.
4. ಸರ್ಬಿಯಾ:
ಸರ್ಬಿಯಾಕ್ಕೆ ಪ್ರಯಾಣಿಸಲು ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಮುಖ್ಯವಾಗಿ ಟರ್ಕಿಗೆ ಆಗಮಿಸುವ 48 ಗಂಟೆ ಮೊದಲು ಪರೀಕ್ಷೆ ಮಾಡಬೇಕು. ಸದ್ಯ ಭಾರತದಿಂದ ಸರ್ಬಿಯಾಕ್ಕೆ ಸೀಮಿತ ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
5. ಈಜಿಪ್ಟ್ :
ಭಾರತ ಸೇರಿದಂತೆ ಕೋವಿಡ್-19 ರೂಪಾಂತರ ಪ್ರಕರಣಗಳು ಹಬ್ಬಿದ್ದ ದೇಶಗಳಿಂದ ಈಜಿಪ್ಟ್ ಗೆ ಆಗಮಿಸುವ ಪ್ರಯಾಣಿಕರಿಗೆ ರ್ಯಾಪಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಅಲ್ಲದೆ ಪ್ರಯಾಣಿಕರು ದೇಶಕ್ಕೆ ಪ್ರವೇಶಿಸಲು ಐಡಿ ನೌ ಎಂಬ ಡಿಎನ್ಎ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಲಸಿಕೆ ಪ್ರಮಾಣ ಪತ್ರ, ಆರ್ ಟಿಪಿಸಿಆರ್ ನೆಗೆಟಿವ್ ವರದಿಯನ್ನು ಕೂಡ ಒಯ್ಯಬೇಕು. ವಿಮಾನ ನಿಲ್ದಾಣದಲ್ಲೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಪಾಸಿಟಿವ್ ಬಂದಲ್ಲಿ ಅಂತಹವರನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ನೆಗೆಟಿವ್ ಬಂದಲ್ಲಿ ಮಾತ್ರ ಪ್ರಯಾಣಿಕರಿಗೆ ಪ್ರವೇಶವನ್ನು ಅನುಮತಿಸಲಾಗುತ್ತದೆ.