alex Certify ಭಾರತದ ಈ ಸುಂದರ ಸ್ಥಳಗಳಿಗೆ ಹೋಗಲು ಇಲ್ಲ ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಈ ಸುಂದರ ಸ್ಥಳಗಳಿಗೆ ಹೋಗಲು ಇಲ್ಲ ಅನುಮತಿ

ಕೆಲವು ಸ್ಥಳಗಳೇ ಹಾಗೆ ಅವನ್ನು ನಾವು ಕೇವಲ ಫೋಟೋ ಅಥವಾ ವಿಡಿಯೋಗಳಲ್ಲಿ ಮಾತ್ರ ನೋಡಬಹುದು. ಅವುಗಳ ಬಳಿ ಹೋಗಲು ಪ್ರವಾಸಿಗರಿಗಷ್ಟೇ ಅಲ್ಲ ಸ್ವತಃ ಅಲ್ಲಿನ ನಾಗರಿಕರಿಗೂ ಅವಕಾಶವಿರುವುದಿಲ್ಲ. ಜನರ ಸುರಕ್ಷತೆಗೋಸ್ಕರವೋ ಅಥವಾ ಇನ್ನೇನೋ ವಿವಾದಗಳಿಂದಲೋ ಅಲ್ಲಿ ಜನರ ಪ್ರವೇಶ ನಿಶಿದ್ಧವಾಗಿರುತ್ತದೆ. ಅಂತಹುದೇ ಕೆಲವು ಕಣ್ಮನ ಸೆಳೆಯುವ, ನಿಷೇಧಿತ ಸ್ಥಳಗಳು ಇಲ್ಲಿವೆ.

ನಾರ್ಥ್ ಸೆಂಟಿನಲ್ ಐಲ್ಯಾಂಡ್, ಅಂಡಮಾನ್: ಇದು ಅಂಡಮಾನಿನ ಒಂದು ನಡುಗಡ್ಡೆ. ಈ ಸ್ಥಳ ಅಂಡಮಾನಿನ ಸಮುದ್ರದಾಳದ ಟೆಕ್ಟೊನಿಕ್ ಪ್ಲೇಟ್ ನ ಮಧ್ಯದಲ್ಲಿದೆ. ಇದನ್ನು ಕೇವಲ ದೂರದಿಂದ ನೋಡಬಹುದು. ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ಹೋಗಲು ಅನುಮತಿ ಇಲ್ಲ.

ಪಾಂಗಾಂಗ್ ತ್ಸೋ ದ ತುದಿಯ ಭಾಗ, ಲಡಾಕ್ : ಪೈಂಗಾಂಗ್ ಭಾರತದ ಹೆಸರು ಮಾತಿನ ಪ್ರವಾಸಿ ತಾಣಗಳಲ್ಲಿ ಒಂದು. ಇದ್ರ ಶೇಕಡಾ 50 ರಷ್ಟು ಭಾಗ ವಿವಾದಕ್ಕೆ ಒಳಪಟ್ಟಿದೆ. ಇದು ಲೈನ್ ಆಫ್ ಅಕ್ಚುವಲ್ ಕಂಟ್ರೋಲ್ ಗೆ ಒಳಪಟ್ಟಿದೆ. ಉಳಿದ ಭಾಗ ಚೀನಾದ ಹಿಡಿತದಲ್ಲಿ ಇರುವುದರಿಂದ ಭಾರತಕ್ಕೆ ಸಂಬಂಧಪಡುವಷ್ಟು ಭಾಗದವರೆಗೆ ಮಾತ್ರ ಭೇಟಿ ಕೊಡಬಹುದಾಗಿದೆ.

ಬ್ಯಾರನ್ ಐಲ್ಯಾಂಡ್, ಅಂಡಮಾನ್: ಭಾರತದ ಏಕಮಾತ್ರ ಜ್ವಾಲಾಮುಖಿ ಇರುವುದು ಈ ಐಲ್ಯಾಂಡಿನಲ್ಲಿ. ಈ ಸ್ಥಳ ಅಂಡಮಾನಿನ ಸಮುದ್ರದಾಳದ ಟೆಕ್ಟೊನಿಕ್ ಪ್ಲೇಟ್ ನ ಮಧ್ಯದಲ್ಲಿದೆ. ಪ್ರವಾಸಿಗರು ಹಡಗಿನ ಮೂಲಕ ಹೋಗುವಾಗ ಈ ಜಾಗವನ್ನು ನೋಡಬಹುದು. ಆದರೆ ಇಲ್ಲಿ ಇಳಿಯುವ ಅವಕಾಶ ಯಾರಿಗೂ ಇಲ್ಲ.

ಲಕ್ಷದ್ವೀಪದ ಕೆಲವು ಐಲ್ಯಾಂಡ್ : ಲಕ್ಷದ್ವೀಪದಲ್ಲಿ ಸುಮಾರು 36 ಐಲ್ಯಾಂಡಗಳಿವೆ. ಇವುಗಳಲ್ಲಿ ಕೆಲವು ಐಲ್ಯಾಂಡಗಳಿಗೆ ಮಾತ್ರ ಪ್ರವಾಸಿಗರು ಹೋಗಬಹುದು. ಕೆಲವು ಐಲ್ಯಾಂಡ್ ಗಳು ಪ್ರಮುಖ ನೌಕಾವಿಷಯಕ್ಕೆ ಸಂಬಂಧಪಟ್ಟಿವೆ. ಹಾಗಾಗಿ ಸುರಕ್ಷತೆಯ ಕಾರಣದಿಂದ ಇಲ್ಲಿ ಹೋಗಲು ಅನುಮತಿ ನೀಡಲಾಗುವುದಿಲ್ಲ.

ಬಾರ್ಕ್, ಮುಂಬೈ : ಬಾರ್ಕ್ ಗೆ ಹೋಗಲು ಪ್ರವಾಸಿಗರಿಗೆ ಅನುಮತಿ ಇಲ್ಲ. ಏಕೆಂದರೆ ಇದು ಭಾರತದ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರವಾಗಿದೆ. ಸರಕಾರಿ ಸಂಸ್ಥೆಗಳ ಅನುಮತಿಯಿಂದ ಶೋಧನಾಕಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಇಲ್ಲಿ ಹೋಗಲು ಅವಕಾಶವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...