ಟೋಕಿಯೊ : ಟೋಕಿಯೊದ ಪೂರ್ವ ಭಾಗದಲ್ಲಿರುವ ಚಿಬಾ ಪ್ರಾಂತ್ಯದಲ್ಲಿ ಗುರುವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಹವಾಮಾನ ಸಂಸ್ಥೆ ತಿಳಿಸಿದೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 12.12 ರ ಸುಮಾರಿಗೆ 50 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಜಪಾನಿನ ಭೂಕಂಪನ ತೀವ್ರತೆಯ ಮಾಪಕದಲ್ಲಿ 4 ರಷ್ಟಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ, ಆದರೆ ಸುನಾಮಿ ಅಪಾಯವಿಲ್ಲ ಹವಾಮಾನ ಸಂಸ್ಥೆ ತಿಳಿಸಿದೆ.
ಭೂಕಂಪದ ಕೇಂದ್ರಬಿಂದುವು ಪೂರ್ವ ಚಿಬಾ ಪ್ರಾಂತ್ಯದಿಂದ 35.2 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 140.5 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು.ಟೋಕಿಯೊದ ಎಲ್ಲಾ 23 ವಾರ್ಡ್ಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಯಾವುದೇ ಗಾಯಗಳು ಅಥವಾ ದೊಡ್ಡ ಹಾನಿಯ ಬಗ್ಗೆ ತಕ್ಷಣದ ವರದಿಗಳಿಲ್ಲ.