
ಡೇವ್ ಸ್ಮಿತ್ ಎಂಬುವವರು 2017 ರಲ್ಲಿ ಮಸ್ಕ್ ಅವರೊಂದಿಗೆ ತಮ್ಮ ಟ್ವೀಟ್ ವಿನಿಮಯವನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಅನ್ನು ಖರೀದಿಸಲು ಬಿಲಿಯನೇರ್ ಅನ್ನು ಕೇಳಿದ್ದರು. ಅದಕ್ಕೆ ಉತ್ತರವಾಗಿ ಮಸ್ಕ್ ಅದರ ಬೆಲೆ ಎಷ್ಟು ಎಂದು ಕೇಳಿದ್ದರು. ಇದೀಗ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಿದ್ದಾರೆ. ಐದು ವರ್ಷಗಳ ಹಿಂದಿನ ವಿನಿಮಯದ ಬಗ್ಗೆ ಬಳಕೆದಾರರು ಆಶ್ಚರ್ಯ ಪಡುತ್ತಿದ್ದಾರೆ.
ಎಲೋನ್ ಮಸ್ಕ್ ಅವರು ತಾನು ಟ್ವಿಟ್ಟರ್ ಅನ್ನು ಪ್ರೀತಿಸುವುದಾಗಿ ಹೇಳಿದ್ದರು. ಅದಕ್ಕೆ ಡೇವ್ ಸ್ಮಿತ್, ಹಾಗಿದ್ದರೆ ಅದನ್ನು ನೀವು ಖರೀದಿಸಬಹುದಲ್ಲವೇ ಎಂದು ಹೇಳಿದ್ದರು. ಇದಕ್ಕೆ ಎಲೋನ್ ಮಸ್ಕ್ ಅವರು ಅದರ ಬೆಲೆ ಎಷ್ಟು ಎಂದು ಕೇಳಿದ್ದರು. ಇದೀಗ ಈ ಟ್ವೀಟ್ ಮುನ್ನಲೆಗೆ ಬಂದಿದೆ. ಈ ವಿನಿಮಯವು ತನ್ನನ್ನು ಕಾಡುತ್ತಲೇ ಇದೆ ಎಂದು ಡೇವ್ ಸ್ಮಿತ್ ಹಂಚಿಕೊಂಡಿದ್ದಾರೆ.
ವಾರಗಟ್ಟಲೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಕೊನೆಗೂ ಅಂತ್ಯ ಹಾಡಲಾಗಿದೆ. ಟ್ವಿಟ್ಟರ್ ಮಂಡಳಿಯು ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯನ್ನು $44 ಶತಕೋಟಿ ಹಣಕ್ಕೆ ಖರೀದಿಸುವ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ ಪ್ರಸ್ತಾಪವನ್ನು ಸ್ವೀಕರಿಸಿದೆ.
ಸರಿಸುಮಾರು $44 ಶತಕೋಟಿ ಮೌಲ್ಯದ ವಹಿವಾಟಿನಲ್ಲಿ ಪ್ರತಿ ಷೇರಿಗೆ $54.20 ನಗದು ರೂಪದಲ್ಲಿ ಎಲೋನ್ ಮಸ್ಕ್ ಅವರ ಸಂಪೂರ್ಣ ಮಾಲೀಕತ್ವದ ಘಟಕದಿಂದ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ವಹಿವಾಟನ್ನು ಟ್ವಿಟ್ಟರ್ನ ನಿರ್ದೇಶಕರ ಮಂಡಳಿಯು ಸರ್ವಾನುಮತದಿಂದ ಅನುಮೋದಿಸಿದೆ.