
ಬೆಂಗಳೂರು: ಬೇಸಿಗೆ ಇನ್ನೂ ಐದು ತಿಂಗಳು ಇರುವಾಗಲೇ ರಾಜ್ಯದಲ್ಲಿ ಸೆಖೆ ಶುರುವಾಗಿದೆ. ಮಳೆ ಕಡಿಮೆಯಾಗಿರುವುದರಿಂದ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಿದ್ದು, ವಾಡಿಕೆಗಿಂತ 3-5 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಹೆಚ್ಚಳವಾಗಿದೆ.
ತಾಪಮಾನ ಹೆಚ್ಚಳ, ಸೆಖೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಬೇಸಿಗೆ ಇನ್ನೂ ಐದು ತಿಂಗಳು ಇರುವಾಗಲೇ ಸೆಖೆಯ ವಾತಾವರಣ ನಿರ್ಮಾಣವಾಗಿದೆ. ಮುಂಗಾರು ಕುಂಠಿತವಾಗಿ ಶೇಕಡ 62 ರಷ್ಟು ಮಳೆ ಕೊರತೆಯಾಗಿದೆ. ಇದರ ಪರಿಣಾಮ ಉಷ್ಣಾಂಶ ಏರಿಕೆ ಕಂಡಿದೆ. ರಾಜ್ಯದ ಬೆಂಗಳೂರು, ಬೀದರ್, ಧಾರವಾಡ, ಕಲಬುರಗಿ, ಮಂಡ್ಯ, ಚಿತ್ರದುರ್ಗ, ರಾಯಚೂರು, ಬಾಗಲಕೋಟೆ, ವಿಜಯಪುರ, ಬಾದಾಮಿ ಮೊದಲಾದ ಕಡೆ ಕಳೆದ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ವಾಡಿಕೆಗಿಂತ ಮೂರರಿಂದ ಐದು ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ಏರಿಕೆಯಾಗಿದೆ. ಮಳೆಗಾಲ ಮುಗಿದು ಚಳಿಗಾಲದ ಬದಲು ಬೇಸಿಗೆ ಶುರುವಾಗಿದೆ. ಇದರಿಂದಾಗಿ ಜನ ಹೈರಣಾಗಿದ್ದಾರೆ.