alex Certify BREAKING : ನಿಡಘಟ್ಟದಿಂದ 4 ನೇ ದಿನದ ‘ದೋಸ್ತಿ’ ಪಕ್ಷಗಳ ಪಾದಯಾತ್ರೆ ಆರಂಭ ; ರೈತರು, ವಿವಿಧ ಸಂಘಟನೆಗಳು ಸಾಥ್.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ನಿಡಘಟ್ಟದಿಂದ 4 ನೇ ದಿನದ ‘ದೋಸ್ತಿ’ ಪಕ್ಷಗಳ ಪಾದಯಾತ್ರೆ ಆರಂಭ ; ರೈತರು, ವಿವಿಧ ಸಂಘಟನೆಗಳು ಸಾಥ್.!

ಮಂಡ್ಯ : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ದೋಸ್ತಿಗಳು ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟದಿಂದ ಇಂದು ಮತ್ತೆ ಪಾದಯಾತ್ರೆ ಆರಂಭವಾಗಿದ್ದು, 4 ನೇ ದಿನದ ಪಾದಯಾತ್ರೆಗೆ ವಿಪಕ್ಷ ನಾಯಕ ಆರ್ ಅಶೋಕ್, ಬಿ.ವೈ ವಿಜಯೇಂದ್ರ ಚಾಲನೆ ನೀಡಿದ್ದಾರೆ. ಬಾಣ ಬಿಡುವ 4 ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ದೋಸ್ತಿ ಪಕ್ಷಗಳ ಪಾದಯಾತ್ರೆಗೆ ರೈತರು, ವಿವಿಧ ಸಂಘಟನೆಗಳು ಸಾಥ್ ನೀಡಿದೆ.

ಕಳೆದ 3 ದಿನದ ಪಾದಯಾತ್ರೆಯಲ್ಲಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಕುಮಾರಸ್ವಾಮಿ, ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತಿತರರು ಭಾಗಿಯಾಗಿದ್ದಾರೆ . ಮೊದಲನೇ ದಿನ ಬೆಂಗಳೂರಿನ ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದ ಬಳಿ ನಗಾರಿ ಬಾರಿಸುವ ಮೂಲಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ, ಕೇಂದ್ರ ಮಂತ್ರಿ HD ಕುಮಾರಸ್ವಾಮಿ ಅವರು ಪಾದಯಾತ್ರೆಗೆ ಚಾಲನೆ ನೀಡಿದ್ದರು. ಇದಾದ ಬಳಿಕ ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿ ಪಾದಯಾತ್ರೆ ಹೊರಟಿದ್ದರು.

 

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...