ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಲಾಭ ಪಡೆಯುತ್ತಿರುವ ರೈತರಿಗೆ ಖುಷಿ ಸುದ್ದಿಯೊಂದಿದೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 2000 ರೂಪಾಯಿಗಳ ಬದಲಾಗಿ 4000 ರೂಪಾಯಿಗಳ ಕಂತು ರೈತರ ಖಾತೆಗೆ ಬರುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ರೈತರು, ಪಿಎಂ ಕಿಸಾನ್ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಬೇಕಿದೆ.
ಹೆಸರು ನೋಂದಾಯಿಸಿಕೊಳ್ಳಲು ಸೆಪ್ಟೆಂಬರ್ 30 ಕೊನೆ ದಿನವಾಗಿದೆ. ಅರ್ಜಿ ಸ್ವೀಕರಿಸಿದರೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ 2000 ರೂಪಾಯಿಗಳು ರೈತರ ಖಾತೆ ಸೇರಲಿವೆ. ಡಿಸೆಂಬರ್ನಲ್ಲಿ ಬ್ಯಾಂಕ್ ಖಾತೆಗೆ 2000 ರೂಪಾಯಿ ಕಂತು ಬರಲಿದೆ. ಸರ್ಕಾರ ನೀಡುವ 4000 ರೂಪಾಯಿಗಳನ್ನು ಪಡೆಯಲು ಬಯಸಿದರೆ ಸೆಪ್ಟೆಂಬರ್ 30ರವರೆಗೆ ಅವಕಾಶವಿದೆ.
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಈ ಖಾತೆಯಿದ್ರೆ ಸಿಗಲಿದೆ 1 ಕೋಟಿ ವಿಮೆ ಲಾಭ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೊತ್ತವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ. ಒಂದು ವೇಳೆ ಸರ್ಕಾರ, ಮೊತ್ತವನ್ನು ದ್ವಿಗುಣಗೊಳಿಸಿದ್ರೆ,ರೈತರಿಗೆ ಪ್ರತಿ ವರ್ಷ 6000 ರೂಪಾಯಿಗಳ ಬದಲಾಗಿ ಮೂರು ಕಂತುಗಳಲ್ಲಿ 12000 ರೂಪಾಯಿ ಬರಲಿದೆ. ಈ ಯೋಜನೆಯಡಿ ಇದುವರೆಗೆ 12.14 ಕೋಟಿ ರೈತರು ಲಾಭ ಪಡೆಯುತ್ತಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅಧಿಕೃತ ವೆಬ್ ಸೈಟ್ ಗೆ ಹೋಗಬೇಕು. ಅಲ್ಲಿ ರೈತರ ಸೆಕ್ಷನ್ ಗೆ ಹೋಗಬೇಕು. ಅಲ್ಲಿ ರೈತರ ಸೆಕ್ಷನ್ ಗೆ ಹೋಗಬೇಕು. ಹೊಸ ರೈತ ನೋಂದಣಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇದರ ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಕ್ಯಾಪ್ಚಾ ಕೋಡ್ ನಮೂದಿಸುವ ಮೂಲಕ ರಾಜ್ಯವನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತ್ರ ವೈಯಕ್ತಿಕ ಮಾಹಿತಿ ನೀಡಬೇಕು. ಬ್ಯಾಂಕ್ ಖಾತೆ ವಿವರಗಳು ಮತ್ತು ಫಾರ್ಮ್ಗೆ ಸಂಬಂಧಿಸಿದ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ನಂತ್ರ ಅರ್ಜಿ ಸಲ್ಲಿಸಬೇಕು
ಮೋದಿ ಸರ್ಕಾರವು ಫೆಬ್ರವರಿ 24, 2019 ರಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಡಿ ಸರ್ಕಾರ, ಪ್ರತಿವರ್ಷ ಸಣ್ಣ ರೈತರಿಗೆ ಮೂರು ಕಂತುಗಳಲ್ಲಿ 6000 ರೂಪಾಯಿ ನೀಡುತ್ತ ಬಂದಿದೆ. ಡಿಸೆಂಬರ್ 1 ರಿಂದ ಮಾರ್ಚ್ 31 ರ ನಡುವೆ ಮೊದಲ ಕಂತು ಬರುತ್ತದೆ. ಎರಡನೇ ಕಂತು, ಏಪ್ರಿಲ್ 1 ರಿಂದ ಜುಲೈ 31 ರವರೆಗೆ ಮತ್ತು ಮೂರನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.