alex Certify 22 ವರ್ಷದ ಮಗಳಂತೆ ವೇಷ ಬದಲಿಸಿದ 48 ರ ಮಹಿಳೆ…! ಈಕೆ ಮಾಡಿರೋ ಅವಾಂತರ ಕೇಳಿದ್ರೆ ಬೆಚ್ಚಿಬೀಳ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

22 ವರ್ಷದ ಮಗಳಂತೆ ವೇಷ ಬದಲಿಸಿದ 48 ರ ಮಹಿಳೆ…! ಈಕೆ ಮಾಡಿರೋ ಅವಾಂತರ ಕೇಳಿದ್ರೆ ಬೆಚ್ಚಿಬೀಳ್ತೀರಾ..!

48 ವರ್ಷದ ಮಹಿಳೆಯೊಬ್ಬಳು ತನ್ನ 22 ವರ್ಷದ ಮಗಳಂತೆ ವೇಷ ಮರೆಸಿ, ವಿಶ್ವವಿದ್ಯಾಲಯಕ್ಕೂ ಪ್ರವೇಶ ಪಡೆದಿದ್ದಾಳೆ. ಎರಡು ವರ್ಷ ಈ ರೀತಿ ಮೋಸ ಮಾಡಿದ ಮಹಿಳೆಯು ವಿದ್ಯಾರ್ಥಿ ಸಾಲ ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡಿದ್ದಲ್ಲದೆ, ಯುವಕರೊಂದಿಗೆ ಡೇಟಿಂಗ್ ಸಹ ಮಾಡಿರುವಂತಹ ವಿಲಕ್ಷಣ ಘಟನೆ ನಡೆದಿದೆ.

ಲಾರಾ ಓಗ್ಲೆಸ್ಬಿ ಎಂಬ ಮಹಿಳೆ ವಂಚನೆ ಎಸಗಿದಾಕೆ. ಈಕೆ 2016 ರಲ್ಲಿ ತನ್ನ ಮಗಳು ಲಾರೆನ್ ಆಶ್ಲೀಗ್ ಹೇಸ್ ಹೆಸರಿನಲ್ಲಿ ಸಾಮಾಜಿಕ ಭದ್ರತಾ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದಳು. ಪುತ್ರಿಯ ಹೆಸರಲ್ಲಿ ಡ್ರೈವಿಂಗ್ ಲೈಸೆನ್ಸ್ ಕೂಡ ಪಡೆದುಕೊಂಡಿದ್ದಾಳೆ.

ತನ್ನ ಮಗಳ ಗುರುತನ್ನು ಬಳಸಿಕೊಂಡು 2017 ರಲ್ಲಿ, ಆಕೆ ಸೌತ್‌ವೆಸ್ಟ್ ಬ್ಯಾಪ್ಟಿಸ್ಟ್ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದಿದ್ದಾಳೆ. ಸ್ಟೂಡೆಂಟ್ ಐಡಿಯಲ್ಲಿ ಸಾಲ ಪಡೆದಿದ್ದು, ಫೆಡರಲ್ ವಿದ್ಯಾರ್ಥಿ ಸಾಲದಲ್ಲಿ $9,400 (ರೂ. 7.12 ಲಕ್ಷ), ಪೆಲ್ ಅನುದಾನದಲ್ಲಿ $5,920 (ರೂ. 4.48 ಲಕ್ಷ), ವಿಶ್ವವಿದ್ಯಾನಿಲಯದ ಪುಸ್ತಕದಂಗಡಿಯಲ್ಲಿ ಖರೀದಿಸಿದ ಪುಸ್ತಕಗಳಿಗೆ $337 (ರೂ. 25,500) ಮತ್ತು $1,863 (ರೂ. 1.1 ಲಕ್ಷ) ಸಾಲ ಪಡೆದುಕೊಂಡಿದ್ದಾಳೆ.

ಲಾರಾ ತನ್ನ ಮಗಳೊಂದಿಗೆ ಅರ್ಕಾನ್ಸಾಸ್‌ನಲ್ಲಿ ವಾಸಿಸುತ್ತಿದ್ದಳು. ನಂತರ ಏಕಾಂಗಿಯಾಗಿ ಮಿಸೌರಿಗೆ ತೆರಳಿದ್ದು, ಅಲ್ಲಿಂದ ಆಕೆ ತನ್ನ ಮಗಳ ಜೊತೆ ಸಂಪರ್ಕ ಕಳೆದುಕೊಳ್ಳುತ್ತಾಳೆ. ಮೌಂಟೇನ್ ವ್ಯೂ ಎಂಬ ಸಣ್ಣ ಪಟ್ಟಣದಲ್ಲಿರುವ ಸ್ಥಳೀಯರು ಲಾರಾಳನ್ನು 22 ವರ್ಷದ ಯುವತಿ ಎಂದೇ ನಂಬಿದ್ದರು. ಅಲ್ಲದೆ ಆಕೆಗೆ ಸ್ಥಳೀಯ ಗ್ರಂಥಾಲಯದಲ್ಲಿ ಕೆಲಸವೂ ಸಿಕ್ಕಿತು.

2018 ರಲ್ಲಿ ಮಿಸೌರಿಯ ಪೊಲೀಸರು ತನ್ನ ಮಗಳ ಗುರುತನ್ನು ಕದ್ದಿದ್ದರಿಂದ ಲಾರಾಳನ್ನು ಹುಡುಕುತ್ತಿದ್ದರು. ಈ ವೇಳೆ ಗುರುತು ಮರೆಸಿಕೊಂಡಿರುವ ಸುಳಿವು ಪೊಲೀಸರಿಗೆ ಸಿಕ್ಕಿದೆ. ಆರಂಭದಲ್ಲಿ ಆಕೆ ಆರೋಪವನ್ನು ನಿರಾಕರಿಸಿದ್ರೂ, ಪುರಾವೆಗಳನ್ನು ತೋರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.

ಲಾರಾ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ತರಗತಿಗಳಿಗೆ ಹಾಜರಾಗಿದ್ದಾರೆಯೇ ಎಂಬುದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಆದರೆ, ತಾನು ಮಾಡಿರುವ ಸ್ವಯಂಕೃತ ಅಪರಾಧಕ್ಕೆ ಲಾರಾ ಐದು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...