ಪಶ್ಚಿಮ ಕೀನ್ಯಾದ ಲೋಂಡಿಯಾನಿಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ. ಹಡಗು ಕಂಟೈನರ್ ಸಾಗಿಸುತ್ತಿದ್ದ ಲಾರಿಯೊಂದು ರಸ್ತೆಯಿಂದ ಆಚೆ ಬಂದು ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದ ನಂತರದ ದೃಶ್ಯಾವಳಿಗಳು ಹಾನಿಗೊಳಗಾದ ಮಿನಿಬಸ್ ಗಳು ಮತ್ತು ಟ್ರಕ್ ಗಳ ಜೊತೆಗೆ ಕಾರ್ ಗಳು ಮತ್ತು ಮೋಟಾರ್ ಬೈಕ್ ಗಳ ನಜ್ಜುಗುಜ್ಜಾದ ಅವಶೇಷಗಳನ್ನು ತೋರಿಸಿದೆ.
ಸಾವಿನ ಸಂಖ್ಯೆ 48 ರಷ್ಟಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾದೇಶಿಕ ಪೊಲೀಸ್ ಕಮಾಂಡರ್ ಟಾಮ್ ಒಡೆರಾ ಹೇಳಿದ್ದಾರೆ.
ಆರಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಲಾರಿ ಪಾದಚಾರಿಗಳ ಮೇಲೆ ಹರಿದಿದೆ. 20 ಕ್ಕೂ ಹೆಚ್ಚು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಕೀನ್ಯಾ ರೆಡ್‌ಕ್ರಾಸ್ ಹೇಳಿದೆ.