ಬೆಂಗಳೂರು: ಕಾಂಗ್ರೆಸ್ ಪಕ್ಷದ 44 ಮಂದಿ ಕಾರ್ಯಕರ್ತರಿಗೆ ನಿಗಮ -ಮಂಡಳಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಿ ಅಂತಿಮಗೊಳಿಸಿ ಸಹಿ ಹಾಕಿದ್ದು, ಇಂದು ಆಯಾ ಇಲಾಖೆಗಳಿಂದ ನೇಮಕಾತಿ ಆದೇಶ ರವಾನೆ ಆಗಲಿದೆ. ಪ್ರಮುಖ ಕಾರ್ಯಕರ್ತರ ಪಟ್ಟಿ ಇಲ್ಲಿದೆ.
ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಸರೋವರ ಶ್ರೀನಿವಾಸ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಅಲ್ತಾಫ್, ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಶಾಂತನಾಯಕ್, ಮಹಿಳಾ ಆಯೋಗ ಅಧ್ಯಕ್ಷರಾಗಿ ನಾಗಲಕ್ಷ್ಮಿ ಚೌಧರಿ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಆರ್.ಎಂ. ಮಂಜುನಾಥಗೌಡ, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಸುಂದರೇಶ್, ಸಾಂಬಾರು ಮಂಡಳಿ ಅಧ್ಯಕ್ಷರಾಗಿ ಪಲ್ಲವಿ ಅವರನ್ನು ನೇಮಿಸಲಾಗಿದೆ.
ವಿನೋದ ಅಸೂಟಿ, ಆಂಜನೇಯಲು, ಮರಿಗೌಡ, ಮುಂಡರಗಿ ನಾಗರಾಜ್, ಡಾ.ಹೆಚ್. ಕೃಷ್ಣ, ಎನ್. ರಾಮಪ್ಪ, ಆಯೂಬ್ ಖಾನ್, ಸುಧೀಂದ್ರ, ಜಿ.ಎಸ್. ಮಂಜುನಾಥ್ ಸೇರಿದಂತೆ 44 ಮಂದಿಗೆ ಅವಕಾಶ ನೀಡಲಾಗಿದೆ.