ಈ ವರ್ಷ ಸಾವಿರಾರು ಮಂದಿ ಕೋಟ್ಯಾಧಿಪತಿಗಳು ಭಾರತವನ್ನೇ ತೊರೆಯಲಿದ್ದಾರೆ. ವರದಿಯ ಪ್ರಕಾರ ಈ ವರ್ಷ ಸುಮಾರು 4300 ಮಿಲಿಯನೇರ್‌ಗಳು ದೇಶವನ್ನು ತೊರೆಯುವ ನಿರೀಕ್ಷೆಯಿದೆ. ಪ್ರತಿ ವರ್ಷ ದೇಶದ ಮಿಲಿಯನೇರ್‌ಗಳ ಪಟ್ಟಿಯಲ್ಲಿ ಅನೇಕ ಹೊಸಮುಖಗಳಿರುತ್ತವೆ. ಅದೇ ರೀತಿ ದೇಶ ಬಿಟ್ಟು ಹೋಗುವವರ ಸಂಖ್ಯೆಯೂ ಕಡಿಮೆಯೇನಿಲ್ಲ.
ಆರ್ಥಿಕ ತಜ್ಞರ ಪ್ರಕಾರ ಈ ಮಿಲಿಯನೇರ್‌ಗಳ ಮೂಲಕ ಹೊರಹೋಗುವ ಹಣವು ವಿಶೇಷ ಕಾಳಜಿಯ ವಿಷಯವಲ್ಲ. ಏಕೆಂದರೆ ದೇಶವನ್ನು ತೊರೆಯುವ ಮಿಲಿಯನೇರ್‌ಗಳಿಗಿಂತ ಹೆಚ್ಚಿನ ಸಂಖ್ಯೆಯ ಹೊಸ ಮಿಲಿಯನೇರ್‌ಗಳು ದೇಶದಲ್ಲಿ ಸೃಷ್ಟಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ ಭಾರತ ತೊರೆಯುವ ಹೆಚ್ಚಿನ ಮಂದಿ ಇಲ್ಲೂ ತಮ್ಮ ವ್ಯವಹಾರಗಳನ್ನು ಇಟ್ಟುಕೊಂಡಿರುತ್ತಾರೆ.
ವಿದೇಶಕ್ಕೆ ತೆರಳಿದ ನಂತರವೂ ಅನೇಕ ಮಿಲಿಯನೇರ್‌ಗಳು ತಾವು ಬಿಟ್ಟು ಹೋಗುವ ಆಸ್ತಿ ಮತ್ತು ಹೂಡಿಕೆಯ ಮೂಲಕ ದೇಶದ ಆರ್ಥಿಕತೆಗೆ ಸಹಾಯ ಮಾಡುತ್ತಾರೆ. ಸದ್ಯ ಭಾರತ ಬಿಟ್ಟು ಹೋಗ್ತಿರೋ ಕೋಟ್ಯಾಧಿಪತುಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕಡೆಗೆ ಮುಖಮಾಡಿದ್ದಾರೆ. ಪ್ರಪಂಚದ ವಿವಿಧೆಡೆಯಿಂದ ಬರುವ ಸುಮಾರು 128,000 ಮಿಲಿಯನೇರ್‌ಗಳು ಬರಲಿದ್ದು, ಹೆಚ್ಚಿನ ಮಂದಿ ಯುಎಇ ಮತ್ತು ಅಮೆರಿಕಕ್ಕೆ ಹೋಗಲು ಬಯಸುತ್ತಾರೆ.
ಭಾರತವನ್ನು ತೊರೆಯುತ್ತಿರುವ ಮಿಲಿಯನೇರ್‌ಗಳು ಸೃಷ್ಟಿಸಿದ ಕಂಪನಿಗಳ ಲಾಭವನ್ನು ಭಾರತೀಯರೂ ಪಡೆಯುತ್ತಾರೆ. ಉದಾಹರಣೆಗೆ ಮೈಕ್ರೋಸಾಫ್ಟ್, ಆಪಲ್ ಮತ್ತು ಟೆಸ್ಲಾದಂತಹ ಕಂಪನಿಗಳನ್ನು ಮಿಲಿಯನೇರ್‌ಗಳು ಪ್ರಾರಂಭಿಸಿದರು. ಈ ಕಂಪನಿಗಳು ಸಾವಿರಾರು ಜನರಿಗೆ ಉತ್ತಮ ಸಂಬಳದ ಉದ್ಯೋಗಗಳನ್ನು ನೀಡಿವೆ. ಇದರಿಂದ ಲಕ್ಷಾಧಿಪತಿಗಳು ಆರಂಭಿಸಿದ ವ್ಯವಹಾರಗಳ ಆರ್ಥಿಕ ಪರಿಣಾಮ ಎಷ್ಟು ದೊಡ್ಡದು ಎಂಬುದು ಸ್ಪಷ್ಟವಾಗುತ್ತದೆ. ದೇಶವನ್ನು ತೊರೆಯುವ ಮಿಲಿಯನೇರ್‌ಗಳ ಸಂಖ್ಯೆಯನ್ನು ದೇಶದ ಆರ್ಥಿಕ ಆರೋಗ್ಯದ ಪ್ರಮುಖ ಸೂಚಕವೆಂದು ಪರಿಗಣಿಸಲಾಗುತ್ತದೆ.
ಒಂದು ದೇಶವು ಹೆಚ್ಚಿನ ಸಂಖ್ಯೆಯ ಮಿಲಿಯನೇರ್‌ಗಳನ್ನು ಕಳೆದುಕೊಳ್ಳುತ್ತಿದ್ದರೆ, ಆ ದೇಶದಲ್ಲಿನ ಕೆಲವು ಗಂಭೀರ ಸಮಸ್ಯೆಗಳಿಂದ ಅದು ಸಂಭವಿಸುತ್ತಿದೆ ಎನ್ನಲಾಗುತ್ತದೆ. ಸಮಸ್ಯೆಗಳು ಬಂದಾಗ ದೇಶವನ್ನು ತೊರೆಯುವ ಮೊದಲ ವ್ಯಕ್ತಿ ಶ್ರೀಮಂತರು. ಆದ್ದರಿಂದ ಅವರ ವಲಸೆಯು ಭವಿಷ್ಯದ ಋಣಾತ್ಮಕ ಸಂಕೇತವೂ ಆಗಿರಬಹುದು.