ಕೈಟ್ ಪಕ್ಷಿ ಉಳಿಸಲು ಸಾಹಸ ನಡೆಸಿದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಮೃತರಾದ ಘಟನೆ ನಡೆದಿದೆ. ಮುಂಬೈನಲ್ಲಿ ಅಮರ್ ಮನೀಶ್ ಜರಿವಾಲಾ ಎಂಬುವರು ಗಾಯಗೊಂಡ ಪಕ್ಷಿಯನ್ನು ಎತ್ತಿಕೊಂಡು ಹೋಗುತ್ತಿದ್ದಾಗ ಮತ್ತೊಂದು ವಾಹನ ಡಿಕ್ಕಿ ಹೊಡೆದಿದೆ.
ದಕ್ಷಿಣ ಮುಂಬೈನ ಸೀ ರೋಡ್ ನಿವಾಸಿ ಅಮರ್ ಸೋಮವಾರ ಮಲಾಡ್‌ಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಅವರ ಚಾಲಕ ಶ್ಯಾಮ್ ಸುಂದರ್ ಕಾಮತ್ ಕೂಡ ಗಾಯಗೊಂಡಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರ ವಾಹನದ ಕಿಟಕಿಗೆ ಪಕ್ಷಿ ಬಡಿದಿದೆ. ಬಳಿಕ ನಂತರ ವಾಹನ ನಿಲ್ಲಿಸಿದ್ದರು. ಪಕ್ಷಿಯನ್ನು ಪರೀಕ್ಷಿಸಲು ಅಮರ್ ಹಾಗೂ ಅವರ ಚಾಲಕ ಕಾರಿನಿಂದ ಹೊರಬಂದರು. ಆದರೆ ಮತ್ತೊಂದು ಟ್ಯಾಕ್ಸಿ ಅವರಿಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅಮರ್ ಸ್ಥಳದಲ್ಲೇ ಸಾವನ್ನಪ್ಪಿದರು.
BIG NEWS: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ಗೆ ಮತ್ತೊಂದು ತಿರುವು; ಪತ್ನಿ ಸುಮಾ-ರೇಖಾ ನಡುವಿನ ಮತ್ತೊಂದು ಆಡಿಯೋ ಬಹಿರಂಗ
ಅಮರ್ ತಂದೆ ಮನೀಶ್ ಜರಿವಾಲಾ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿ, ನನ್ನ ಮಗ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಿರುವ ವ್ಯಕ್ತಿ. ಅವನು ಯಾವಾಗಲೂ ಪಕ್ಷಿ ಮತ್ತು ಪ್ರಾಣಿಗಳಿಗೆ ಸಹಾಯ ಮಾಡುತ್ತಿದ್ದನು. ಅವನ ಕಾರಿಗೆ ಪಕ್ಷಿ ಡಿಕ್ಕಿ ಹೊಡೆದಾಗ, ಕಾರು ನಿಲ್ಲಿಸಲು ಹೇಳಿ ಹೊರಬಂದಿದ್ದಾನೆ. ಗಾಯಗೊಂಡ ಹಕ್ಕಿಯನ್ನು ಅಮರ್ ಎತ್ತಿಕೊಂಡು ಹೋಗುತ್ತಿದ್ದಾಗ ಟ್ಯಾಕ್ಸಿ ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಚಾಲಕ ಕಾಮತ್ ಕೂಡ ಗಾಯಗೊಂಡಿದ್ದಾರೆ. ಇಬ್ಬರನ್ನೂ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಚಾಲಕ ಕಾಮತ್ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದರು.
ಅಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮೆರಾಗಳಲ್ಲಿ ನಾವು ಘಟನೆ ನೋಡಿದ್ದೇವೆ. ಪೊಲೀಸರು ಟ್ಯಾಕ್ಸಿ ಚಾಲಕನ ಮೇಲೆ ಆರೋಪ ಹೊರಿಸುವುದನ್ನು ನಾವು ಬಯಸುವುದಿಲ್ಲ. ನಾನು ಈಗಾಗಲೇ ನನ್ನ ಮಗನನ್ನು ಕಳೆದುಕೊಂಡಿದ್ದೇನೆ ಮತ್ತು ಟ್ಯಾಕ್ಸಿ ಡ್ರೈವರ್‌ನ ಕುಟುಂಬವೂ ಸಹ ನರಳುವುದನ್ನು ಬಯಸುವುದಿಲ್ಲ. ನಾವು ಅವನನ್ನು ಕ್ಷಮಿಸುತ್ತೇವೆ ಎಂದು ಮೃತನ ತಂದೆ ಹೇಳಿದ್ದಾರೆ.