ಸಮಾನ ಕೆಲಸಕ್ಕೆ ಸಮಾನ ವೇತನದ ಕುರಿತಾಗಿ ಐಐಎಂ-ಕೋಯಿಕ್ಕೋಡ್ ಹಾಗೂ ಮಹಿಳೆಯರ ವಾಣಿಜ್ಯ ಮತ್ತು ಕೈಗಾರಿಕೆಯ ಸಾರ್ವಜನಿಕ ಸಂಬಂಧಗಳ ಚೇಂಬರ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಸಮಿತಿ ನಡೆಸಿದ ಸಮೀಕ್ಷೆಯೊಂದರಲ್ಲಿ ಆಸಕ್ತಿಕರ ವಿಷಯಗಳು ಬೆಳಕಿಗೆ ಬಂದಿವೆ.
ಸಮಾನ ಕೆಲಸಕ್ಕೆ ಸಮಾನ ವೇತನವನ್ನು ವಾಸ್ತವದಲ್ಲಿ ಕಾಣಲು ಸಿಗುವುದಿಲ್ಲ ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಮಹಿಳೆಯರ ಪೈಕಿ 42% ಮಂದಿ ಅಭಿಪ್ರಾಯ ಪಟ್ಟಿದ್ದಾರೆ. 2021ರಲ್ಲಿ ನಡೆಸಲಾದ ಈ ಸರ್ವೇಯಲ್ಲಿ 1000ಕ್ಕೂ ಹೆಚ್ಚು ಮಹಿಳೆಯರಿಂದ ಪ್ರತಿಕ್ರಿಯೆಗಳು ಬಂದಿವೆ.
ಇಡೀ ದಿನ ಉತ್ಸಾಹ, ಶಕ್ತಿ ಬೇಕೆಂದ್ರೆ ಬೆಳ್ಳಂಬೆಳಿಗ್ಗೆ ಮಾಡಿ ಈ ಕೆಲಸ
ತಮ್ಮ ಕಂಪನಿಯಲ್ಲಿ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶವಿಲ್ಲ ಎಂದು 68% ಮಹಿಳೆಯರು ತಿಳಿಸಿದರೆ, ಮಹಿಳೆಯರಿಗೆ ವೃತ್ತಿಯಲ್ಲಿ ಬೆಳವಣಿಗೆ ಸಾಧಿಸಲು ಸಂಸ್ಥೆಗಳಲ್ಲಿ ಸೂಕ್ತವಾದ ಹಾದಿ ಇಲ್ಲ ಎಂದು 53%ನಷ್ಟು ಪ್ರತಿಕ್ರಿಯೆದಾರರು ತಿಳಿಸಿದ್ದಾರೆ.