ಕೈರೋ: ಈಜಿಪ್ಟ್‌ನ ರಾಜಧಾನಿ ಕೈರೋದಲ್ಲಿರುವ ಕಾಪ್ಟಿಕ್ ಕ್ರಿಶ್ಚಿಯನ್ ಚರ್ಚ್ ನಲ್ಲಿ ಭಾನುವಾರ ಸಂಭವಿಸಿದ ಬೆಂಕಿಯಲ್ಲಿ 41 ಜನರು ಸಾವನ್ನಪ್ಪಿದ್ದಾರೆ.
ರಾಜಧಾನಿಯ ವಾಯುವ್ಯ ಜಿಲ್ಲೆಯ ಕಾರ್ಮಿಕ ವರ್ಗದ ಇಂಬಾಬಾದಲ್ಲಿರುವ ಅಬು ಸಿಫೈನ್ ಚರ್ಚ್ ನಲ್ಲಿ ಅಜ್ಞಾತ ಕಾರಣಗಳಿಗಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಎಂದು ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ.
ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ, ರಕ್ಷಣಾ ಕಾರ್ಯಾಚರಣೆ ಸೇರಿ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲಾ ಅಗತ್ಯ ಸೇವೆಗಳನ್ನು ಸಜ್ಜುಗೊಳಿಸಿದ್ದೇವೆ ಎಂದು ಘೋಷಿಸಿದರು.
ಕಾರ್ಯಾಚರಣೆ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.
ಕಾಪ್ಟ್ ಗಳು ಮಧ್ಯಪ್ರಾಚ್ಯದಲ್ಲಿ ಅತಿದೊಡ್ಡ ಕ್ರಿಶ್ಚಿಯನ್ ಸಮುದಾಯವಾಗಿದ್ದು, ಈಜಿಪ್ಟ್‌ನ 103 ಮಿಲಿಯನ್ ಜನರಲ್ಲಿ ಕನಿಷ್ಠ 10 ಮಿಲಿಯನ್ ಜನರಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್ ನಲ್ಲಿ ಹಲವಾರು ಬೆಂಕಿ ದರುಂತ ಸಂಭವಿಸಿವೆ.
ಮಾರ್ಚ್ 2021 ರಲ್ಲಿ, ಕೈರೋದ ಪೂರ್ವ ಉಪನಗರಗಳಲ್ಲಿನ ಜವಳಿ ಕಾರ್ಖಾನೆಯಲ್ಲಿ ಬೆಂಕಿ ತಗುಲಿ ಕನಿಷ್ಠ 20 ಜನರು ಸಾವನ್ನಪ್ಪಿದರು.
2020 ರಲ್ಲಿ ಎರಡು ಆಸ್ಪತ್ರೆಯಲ್ಲಿ ಬೆಂಕಿ ದುರಂತ 14 ಕೋವಿಡ್ ರೋಗಿಗಳ ಜೀವ ಬಲಿ ತೆಗೆದುಕೊಂಡಿತ್ತು.