alex Certify 41 ವರ್ಷಗಳ ದಾಂಪತ್ಯ, ಪರಸ್ಪರರ ಮೇಲೆ 60 ಕೇಸ್‌: ಸುಪ್ರೀಂ ಸಿಜೆಗಳನ್ನೇ ಅಚ್ಚರಿಯಲ್ಲಿ ಮುಳುಗಿಸಿದೆ ಈ ಪ್ರಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

41 ವರ್ಷಗಳ ದಾಂಪತ್ಯ, ಪರಸ್ಪರರ ಮೇಲೆ 60 ಕೇಸ್‌: ಸುಪ್ರೀಂ ಸಿಜೆಗಳನ್ನೇ ಅಚ್ಚರಿಯಲ್ಲಿ ಮುಳುಗಿಸಿದೆ ಈ ಪ್ರಕರಣ

ಪತಿ-ಪತ್ನಿ ನಡುವಣ ಜಟಾಪಟಿ ಪ್ರಕರಣವೊಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎನ್‌.ವಿ. ರಮಣ ಅವರನ್ನೇ ಆಶ್ಚರ್ಯಚಕಿತಗೊಳಿಸಿದೆ. ಈ ದಂಪತಿ ದೂರವಾಗಿ 11 ವರ್ಷಗಳಾಗಿವೆ. ಈ ಅವಧಿಯೂ ಸೇರಿದಂತೆ ಒಟ್ಟು 41 ವರ್ಷಗಳಲ್ಲಿ ಪರಸ್ಪರರ ವಿರುದ್ಧ ಒಟ್ಟು 60 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಇವರ ವೈವಾಹಿಕ ಕಲಹದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು, ಕೆಲವರು ಯಾವಾಗಲೂ ನ್ಯಾಯಾಲಯದಲ್ಲಿ ಇರಲು ಬಯಸುತ್ತಾರೆ, ಕೋರ್ಟ್‌ ನೋಡದೇ ಇದ್ರೆ ಅವರಿಗೆ ನಿದ್ದೆಯೇ ಬರುವುದಿಲ್ಲ ಎಂದರು. ವಿವಾದವನ್ನು ಇತ್ಯರ್ಥಗೊಳಿಸಲು ಮಧ್ಯಸ್ಥಿಕೆಯ ಮೊರೆ ಹೋಗುವಂತೆ ನ್ಯಾಯಪೀಠ ದಂಪತಿಗಳಿಗೆ ಸಲಹೆ ನೀಡಿದೆ.

ನೂರಾರು ಬಾರಿ ದಂಪತಿ ಕೋರ್ಟ್‌ ಗೆ ಬಂದಿರೋದನ್ನು ನೋಡಿ ನ್ಯಾಯಮೂರ್ತಿ ಹಿಮಾ ಕೊಹ್ಲಿ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ರು. ಈ ದಂಪತಿ ನಡುವಣ ಪ್ರಕರಣಗಳು ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿವೆ. ಈಗಾಗ್ಲೇ ಗಂಡ, ಹೆಂಡತಿ ದೂರವಾಗಿದ್ದಾರೆ. ಮಾವ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಆರೋಪಿಸಿದ್ದಳು. ಈಗ ಇಬ್ಬರೂ ಮಧ್ಯಸ್ಥಿಕೆ ಮೂಲಕ ಜಗಳ ಬಗೆಹರಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ.

ಸಮಗ್ರವಾದ ಇತ್ಯರ್ಥಕ್ಕೆ ನೀವು ಸಿದ್ಧರಿದ್ದೀರಾ ಎಂದು ಸುಪ್ರೀಂ ಕೋರ್ಟ್ ಪತ್ನಿಯ ಪರ ವಕೀಲರನ್ನು ಕೇಳಿದೆ. ಆಕೆಯ ವಕೀಲರು ಮಧ್ಯಸ್ಥಿಕೆಗೆ ಹೋಗಲು ಸಿದ್ಧರಿದ್ದಾರೆ ಆದರೆ ಹೈಕೋರ್ಟ್‌ ವಿಚಾರಣೆಗೆ ತಡೆ ನೀಡಬಾರದು ಎಂದು ಹೇಳಿದರು. ಆದರೆ ಅದು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ. ನೀವು ಹೋರಾಟದಲ್ಲಿ ತುಂಬಾ ಆಸಕ್ತಿ ಹೊಂದಿರುವಂತೆ ತೋರುತ್ತಿದೆ. ಎರಡನ್ನೂ ಮುಂದುವರಿಸಲು ಸಾಧ್ಯವಿಲ್ಲ ಅಂತಾ ನ್ಯಾಯಪೀಠ ಖಡಕ್ಕಾಗಿಯೇ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...