ಇತ್ತೀಚೆಗಷ್ಟೇ ರಾಜ್ಯಸಭಾ ಚುನಾವಣೆ ನಡೆಯಿತು. ವಿವಿಧ ಕಾರಣಕ್ಕೆ ರಾಷ್ಟ್ರದ ಗಮನವನ್ನೂ ಸೆಳೆಯಿತು. ಈಗ ಅಚ್ಚರಿ ಮಾಹಿತಿ ಹೊರಬಿದ್ದಿದೆ.
ಹೊಸದಾಗಿ ಆಯ್ಕೆಯಾದ 57 ರಾಜ್ಯಸಭಾ ಸದಸ್ಯರಲ್ಲಿ, 23 ಮಂದಿ (ಸುಮಾರು 40 ಪ್ರತಿಶತ) ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವ ಸಂಗತಿ ಘೋಷಿಸಿಕೊಂಡಿದ್ದಾರೆ.
ಎಡಿಆರ್- ನ್ಯಾಷನಲ್ ಎಲೆಕ್ಷನ್ ವಾಚ್ ಬಿಡುಗಡೆ ಮಾಡಿದ ವರದಿಯಲ್ಲಿದೆ ಈ ಅಂಶ ಉಲ್ಲೇಖವಾಗಿದೆ.
ಆರು ರಾಜ್ಯಸಭಾ ಸದಸ್ಯರು ಉತ್ತರ ಪ್ರದೇಶದಿಂದ, ತಲಾ ನಾಲ್ವರು ಮಹಾರಾಷ್ಟ್ರ ಮತ್ತು ಬಿಹಾರದಿಂದ, ಮೂರು ತಮಿಳುನಾಡು, ಎರಡು ತೆಲಂಗಾಣ ಮತ್ತು ಆಂಧ್ರಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಹರಿಯಾಣದಿಂದ ತಲಾ ಒಬ್ಬರು ಆಯ್ಕೆಯಾಗಿದ್ದಾರೆ.
ಹೊಸದಾಗಿ ಆಯ್ಕೆಯಾದ ಬಿಜೆಪಿಯ 22 ರಾಜ್ಯಸಭಾ ಸದಸ್ಯರ ಪೈಕಿ ಒಂಬತ್ತು ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಹೊಸದಾಗಿ ಚುನಾಯಿತವಾಗಿರುವ ಕಾಂಗ್ರೆಸ್‌ನ ಒಂಬತ್ತು ಸಂಸದರ ಪೈಕಿ ನಾಲ್ವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಒಟ್ಟು 12 ಸಂಸದರು ತಮ್ಮಮೇಲೆ ‘ಗಂಭೀರ ಕ್ರಿಮಿನಲ್ ಪ್ರಕರಣ’ ಎಂದು ಘೋಷಿಸಿಕೊಂಡಿದ್ದಾರೆ.
BIG NEWS: ಬೇವು ಬಿತ್ತಿ ಮಾವು ಬಯಸಲು ಸಾಧ್ಯವೇ……? ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕುಟುಕಿದ ಬಿಜೆಪಿ
ಹೊಸದಾಗಿ ಚುನಾಯಿತರಾದ 57 ಸಂಸದರ ಚರ ಮತ್ತು ಸ್ಥಿರ ಆಸ್ತಿಯನ್ನು ವಿಶ್ಲೇಷಿಸಿದ ವರದಿಯು, ಅವರಲ್ಲಿ 53 ಮಂದಿ ‘ಕೋಟ್ಯಾಧಿಪತಿ’ ಎಂದು ಹೇಳಿದೆ ಮತ್ತು ಟಿಆರ್‌ಎಸ್ ಸಂಸದ ಬಂಡಿ ಪಾರ್ಥ ಸಾರಧಿ ಅವರ ಒಟ್ಟು ಆಸ್ತಿ 1,500 ಕೋಟಿ ರೂ. ಆಗಿದ್ದು ಅಗ್ರಸ್ಥಾನಿಯಾಗಿದ್ದಾರೆ.
ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶದಿಂದ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದ ಮಾಜಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಒಟ್ಟು ಆಸ್ತಿ ಮೌಲ್ಯ 608 ಕೋಟಿ ರೂ.
ವರದಿಯ ಪ್ರಕಾರ ಆಮ್ ಆದ್ಮಿ ಪಕ್ಷದ (ಎಎಪಿ) ವಿಕ್ರಮಜಿತ್ ಸಿಂಗ್ ಸಾಹ್ನಿ ಮೂರನೇ ಸ್ಥಾನದಲ್ಲಿದ್ದು, ಹೊಸದಾಗಿ ಆಯ್ಕೆಯಾದ ರಾಜ್ಯಸಭಾ ಸಂಸದರ ಒಟ್ಟು ಸರಾಸರಿ ಆಸ್ತಿ ಮೌಲ್ಯ 498 ಕೋಟಿ ರೂಪಾಯಿಯಾಗಿದೆ.