
ಕಲ್ಲುತೂರಾಟ ನಡೆಸಲು ಹುಬ್ಬಳ್ಳಿಯ ದರ್ಗಾದ ಮೌಲ್ವಿಯ ಪ್ರಚೋದನಕಾರಿ ಭಾಷಣವೇ ಕಾರಣವೆಂದು ಹೇಳಲಾಗುತ್ತಿದೆ.
ಮೌಲ್ವಿಯ ಪ್ರಚೋದನಕಾರಿ ಭಾಷಣದಿಂದ ಪ್ರೇರಿತರಾಗಿ ಇನ್ನೂರಕ್ಕೂ ಹೆಚ್ಚು ಮುಸ್ಲಿಂ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಗಲಭೆ ಬಳಿಕ ಮೌಲ್ವಿ ನಾಪತ್ತೆಯಾಗಿದ್ದು ಮೌಲ್ವಿಯ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ.
ಶಾಂತಿ ಮಂತ್ರ ಜಪಿಸಬೇಕಾಗಿದ್ದ ವ್ಯಕ್ತಿಯೇ ಗಲಭೆಗೆ ಪ್ರಚೋದನೆ ನೀಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಪೊಲೀಸರು ಮೌಲ್ವಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.