ತೆಲಂಗಾಣದ ಹೈದರಾಬಾದಿನಲ್ಲಿ ವಿಮೋಚನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು ಈ ಸಂದರ್ಭದಲ್ಲಿ ‘40% ಸಿಎಂ ಅವರಿಗೆ ಸ್ವಾಗತ’ ಎಂಬ ಬೃಹತ್ ಬೋರ್ಡ್ ಹಾಕುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪರೋಕ್ಷವಾಗಿ ಅವಮಾನಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ದಿನಾಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಪಾಲ್ಗೊಳ್ಳುತ್ತಿದ್ದು, ಇದೇ ವೇಳೆ ದೇಶದಾದ್ಯಂತ ಸದ್ದು ಮಾಡಿರುವ ಕರ್ನಾಟಕ ಸರ್ಕಾರದ 40% ಕಮಿಷನ್ ಆರೋಪದ ಪ್ಲೆಕ್ಸ್ ಹಾಕುವ ಮೂಲಕ ಬಿಜೆಪಿಯನ್ನು ತೆಲಂಗಾಣದ ಆಡಳಿತ ಪಕ್ಷ ಟಿ ಆರ್ ಎಸ್ ವ್ಯಂಗ್ಯವಾಡಿದೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಆಡಳಿತರೂಢ ಪಕ್ಷ ಬಿಜೆಪಿ ಗುತ್ತಿಗೆ ಕಾಮಗಾರಿ ಸಂದರ್ಭದಲ್ಲಿ 40 ಪರ್ಸೆಂಟ್ ಕಮಿಷನ್ ಕೇಳುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಆರೋಪ ಮಾಡಿದ್ದರಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಕುರಿತು ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಟಿ ಆರ್ ಎಸ್ ಈ ಫ್ಲೆಕ್ಸ್ ಅಳವಡಿಸಿದೆ ಎನ್ನಲಾಗುತ್ತಿದೆ.