40 ವರ್ಷ ದಾಟಿದ ಬಳಿಕ ನೀವು ನಿಯಮಿತವಾಗಿ ಅಲ್ಪ ಪ್ರಮಾಣದ ಮದ್ಯ ಸೇವಿಸುತ್ತಿದ್ದರೆ ನಿಮಗೊಂದು ಮಹತ್ವದ ಮಾಹಿತಿ ಇಲ್ಲಿದೆ. ಈ ರೀತಿಯ ಮದ್ಯ ಸೇವನೆ ದೇಹದ ಆರೋಗ್ಯಕ್ಕೆ ಪೂರಕವಾಗಿ ಸ್ಪಂದಿಸಿರುವ ಕುರಿತು ಸಂಶೋಧನೆಯಲ್ಲಿ ಕಂಡುಬಂದಿದೆ.
ಹೌದು, ಇಂತದೊಂದು ವರದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟಗೊಂಡಿದ್ದು, 40ವರ್ಷ ದಾಟಿದವರು ಒಂದು ಸಣ್ಣ ಗ್ಲಾಸ್ ರೆಡ್ ವೈನ್ ಅಥವಾ ಒಂದು ಬಾಟಲಿ ಬಿಯರ್ ಅಥವಾ ಒಂದು ಪೆಗ್ ವಿಸ್ಕಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ದೀರ್ಘಾವಧಿಯಲ್ಲಿ ಸಣ್ಣ ಪ್ರಮಾಣದಲ್ಲಿ ಆರೋಗ್ಯಕ್ಕೆ ಲಾಭವಿದೆ ಎಂಬುದು ಸಂಶೋಧನೆಯಲ್ಲಿ ಕಂಡುಬಂದಿದೆ.
40ವರ್ಷ ದಾಟಿದ ಬಳಿಕ ಬಹಳಷ್ಟು ಜನರಿಗೆ ಅವರಿಗೆ ಅರಿವಿಲ್ಲದಂತೆ ಹೃದಯ ಸಂಬಂಧಿ ಸಮಸ್ಯೆ, ಸಕ್ಕರೆ ಕಾಯಿಲೆ ಮೊದಲಾದವುಗಳು ಆರಂಭಿಕ ಹಂತದಲ್ಲಿರುತ್ತವೆ. ಆದರೆ ಈ ರೀತಿ ಮದ್ಯ ಸೇವನೆಯಿಂದ ದೇಹದ ಪರಿಸ್ಥಿತಿ ಸುಧಾರಿಸುತ್ತದೆಯಂತೆ. ಆದರೆ 40 ವರ್ಷದೊಳಗಿನವರು ಮದ್ಯ ಸೇವನೆ ಮಾಡುವುದು ಸೂಕ್ತವಲ್ಲವೆಂದು ಸಂಶೋಧನೆ ಹೇಳಿದೆ.