alex Certify 40 ವರ್ಷಗಳಿಂದ ಟ್ರಾಫಿಕ್‌ ನಡುವೆ ಸರ್ಕಲ್‌ನಲ್ಲೇ ವಾಸಿಸ್ತಿದೆ ಈ ಕುಟುಂಬ; ಕಾರಣ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

40 ವರ್ಷಗಳಿಂದ ಟ್ರಾಫಿಕ್‌ ನಡುವೆ ಸರ್ಕಲ್‌ನಲ್ಲೇ ವಾಸಿಸ್ತಿದೆ ಈ ಕುಟುಂಬ; ಕಾರಣ ಗೊತ್ತಾ…..?

ಇಂಗ್ಲೆಂಡ್‌ನ ವೇಲ್ಸ್‌ನಲ್ಲಿರುವ ಕುಟುಂಬವೊಂದು ಕಳೆದ 60 ವರ್ಷಗಳಿಂದ ಸರ್ಕಲ್‌ನಲ್ಲಿ ವಾಸಿಸ್ತಾ ಇದೆ. ಸರ್ಕಾರಿ ಜಮೀನು ಅತಿಕ್ರಮಣ ಅಥವಾ ನಿರಾಶ್ರಿತರು ಎಂಬ ಕಾರಣಕ್ಕೆ ಈ ಕುಟುಂಬ ಇಲ್ಲಿ ಬೀಡುಬಿಟ್ಟಿಲ್ಲ. ಇವರು ಕೊಳಗೇರಿ ನಿವಾಸಿಗಳು ಅಲ್ಲ. ಖಾಸಗಿ ಆಸ್ತಿಯಾದ ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಜೀವಕ್ಕೆ ಅಪಾಯವಿದ್ದರೂ ಈ ಮನೆಯನ್ನು ಬಿಡಲು ಸಿದ್ಧವಿಲ್ಲ. ವೇಲ್ಸ್‌ನ ಡೆನ್‌ಬಿಗ್‌ಶೈರ್‌ನಲ್ಲಿರುವ ಕುಟುಂಬವು ಸರ್ಕಲ್‌  ಮಧ್ಯದಲ್ಲಿ ವಾಸಿಸುತ್ತಿದೆ. ಅವರ ದೊಡ್ಡ ಮನೆಯನ್ನು ಮಧ್ಯದ ಸಂದಿಯ ಜಮೀನಿನಲ್ಲಿ ನಿರ್ಮಿಸಲಾಗಿದೆ.

ಇವರ ಮನೆ ತುಂಬಾ ಫೇಮಸ್. ಈ ಕುಟುಂಬ ಹಲವು ದಶಕಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿದೆ. ಏನೇ ಆದರೂ ಈ ಮನೆಯನ್ನು ಖಾಲಿ ಮಾಡುವುದಿಲ್ಲ ಎನ್ನುತ್ತಾರೆ ಮಾಲೀಕ ಡೇವಿಡ್ ಜಾನ್ ಮತ್ತು ಅವರ ಪತ್ನಿ ಅರಿಯಾನೆ. 1960 ರಲ್ಲಿ ಅವರ ಸಂಬಂಧಿಕರು ಇಲ್ಲಿಗೆ ಬಂದಾಗ, ಈ ಪ್ರದೇಶವು ಜನವಸತಿ ರಹಿತವಾಗಿತ್ತು. ಮನೆಗಳೇ ಇರಲಿಲ್ಲ, ಸುತ್ತಲೂ ಹಸಿರು ಗದ್ದೆಗಳಿದ್ದವು. ಡೇವಿಡ್‌ ಪೂರ್ವಜರು ಇಲ್ಲಿ ಮನೆ ಕಟ್ಟಿಕೊಂಡಿದ್ದರು. ಈ ಪ್ರದೇಶ ಆಧುನೀಕರಣಗೊಳ್ಳುವ ಮುನ್ನ ಸುಮಾರು 20 ವರ್ಷಗಳ ಕಾಲ ಅವರು ಅತ್ಯಂತ ಆರಾಮವಾಗಿ ಜೀವನ ನಡೆಸುತ್ತಿದ್ದರು.

ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡುವಂತೆ ಆಡಳಿತದ ಸೂಚನೆ ಬಂದಿತ್ತು. ನಿಖರವಾಗಿ ಅದು ಹೊಸ ಸರ್ಕಲ್‌ ನಿರ್ಮಾಣದ ಜಾಗದಲ್ಲೇ ಇತ್ತು. ಮನೆ ಬಿಟ್ಟು ಹೋಗುವುದಿಲ್ಲವೆಂದು ಈ ಕುಟುಂಬ ಪಟ್ಟು ಹಿಡಿದಿತ್ತು. ಸತ್ತ ಮೇಲೆ ಮಾತ್ರ ಈ ಮನೆಯಿಂದ ಹೊರಬರುವುದಾಗಿ ಡೇವಿಡ್‌ ಹೇಳಿದ್ದಾರೆ. ಕುಟುಂಬಸ್ಥರು ಪಟ್ಟು ಬಿಡದೇ ಇದ್ದಿದ್ರಿಂದ ಸ್ಥಳೀಯ ಆಡಳಿತವು ಈ ಸ್ಥಳವನ್ನು ಅಡ್ಡರಸ್ತೆಯಾಗಿ ಪರಿವರ್ತಿಸಿತು. ದಶಕಗಳಿಂದ ಮನೆ ಸಾರ್ವಜನಿಕ ಸಂಚಾರದ ಅಡ್ಡ ರಸ್ತೆಯಲ್ಲಿದೆ. ಅವರು 40 ವರ್ಷಗಳಿಂದ ಈ ಸ್ಥಳದಲ್ಲಿ ವಾಸಿಸುತ್ತಿದ್ದಾರೆ. ದಿನವಿಡೀ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಗಲಾಟೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...