alex Certify 40 ವಯಸ್ಸಿನ ನಂತರವೂ ಫಿಟ್ ಆಗಿರಬೇಕೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

40 ವಯಸ್ಸಿನ ನಂತರವೂ ಫಿಟ್ ಆಗಿರಬೇಕೆ…?

ವಯಸ್ಸು 40 ಆಗುತ್ತಿದ್ದಂತೆ ಮಹಿಳೆಯರು ತೂಕ ಹೆಚ್ಚಾಗಿ ವಯಸ್ಸಾದವರಂತೆ ಕಾಣುತ್ತಾರೆ. ದೇಹವು ಫಿಟ್ ಆಗಿ ಆರೋಗ್ಯವಾಗಿರಬೇಕೆಂದು ಎಲ್ಲಾ ಮಹಿಳೆಯರು ಬಯಸುತ್ತಾರೆ. ಅಂತಹ ಮಹಿಳೆಯರು ಈ ಟಿಪ್ಸ್ ನ್ನು ಫಾಲೋ ಮಾಡಿ ನೋಡಿ.

ಬೆಳಿಗ್ಗೆ ಉಪಹಾರವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ನಮ್ಮ ದೇಹದ ಚಯಾಪಚಯ ಕ್ರಿಯೆಯು 2% ರಷ್ಟು ನಿಧಾನವಾಗುವುದರಿಂದ ಉಪಹಾರ ಸೇವಿಸುವುದು ಅತ್ಯಗತ್ಯ.

ಕೀಲು ನೋವು, ಮಂಡಿನೋವು, ಬೆನ್ನು ನೋವು ಸಮಸ್ಯೆ ಇದ್ದರೂ, ಪ್ರತಿದಿನ ವ್ಯಾಯಾಮ ಮಾಡುವುದನ್ನು ನಿಲ್ಲಿಸಬೇಡಿ. ಇದರಿಂದ ದೇಹ ಫಿಟ್ ಆಗಿರುವುದರ ಜತೆಗೆ ಲವಲವಿಕೆಯಿಂದ ಕೂಡಿರುತ್ತದೆ.

ಇನ್ನು ನಿಮ್ಮ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ. ಅದಕ್ಕಾಗಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಧ್ಯಾನ ಮಾಡಿ. ನಿಮ್ಮ ಸ್ನೇಹಿತರ ಜೊತೆಗೆ ಬೆರೆಯಿರಿ. ಕೊಬ್ಬಿನಂಶ ಇರುವ ಆಹಾರ, ಸಕ್ಕರೆ ಮತ್ತು ಜಂಕ್ ಫುಡ್ ಗಳನ್ನು ಸೇವಿಸುವುದನ್ನು ತಪ್ಪಿಸಿ. ಆರೋಗ್ಯಕರವಾದ ಹಣ್ಣು ಮತ್ತು ತರಕಾರಿಗಳನ್ನು ಯಥೇಚ್ಛವಾಗಿ ಸೇವಿಸಿ. 6 ತಿಂಗಳಿಗೊಮ್ಮೆ ವೈದ್ಯರ ಬಳಿ ನಿಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳಿರಿ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...