ಕನಸಿನ ಉದ್ಯೋಗಕ್ಕೆ ಸೇರುವುದು ಸುಲಭದ ಕೆಲಸವಲ್ಲ. ಇಲ್ಲೊಬ್ಬ ಆಕಾಂಕ್ಷಿಗೆ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಅನ್ನೋ ಆಸೆ. ಆದ್ರೆ ಬರೋಬ್ಬರಿ 39 ಬಾರಿ ಆತ ಗೂಗಲ್ ಸಂದರ್ಶನದಲ್ಲಿ ತಿರಸ್ಕೃತಗೊಂಡಿದ್ದಾನೆ. 40ನೇ ಬಾರಿ ಅವನ ಆಸೆ ನೆರವೇರಿದೆ.
ಟೈಲರ್ ಕೋಹೆನ್ ಎಂಬಾತ Strategy & Ops at DoorDashನಲ್ಲಿ ಸ್ಟ್ರಾಟಜಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ. 2019ರಲ್ಲಿ ಟೈಲರ್ ಮೊದಲ ಬಾರಿಗೆ ಗೂಗಲ್‌ನಲ್ಲಿ ಕೆಲಸಕ್ಕಾಗಿ ಅರ್ಜಿ ಗುಜರಾಯಿಸಿದ್ದಾನೆ. ಆದ್ರೆ ಅದು ತಿರಸ್ಕೃತಗೊಂಡಿದೆ.
ಇದರಿಂದ ನಿರಾಶನಾಗದ ಆತ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೇ ಇದ್ದ. ಮೂರು ವರ್ಷಗಳಲ್ಲಿ 39 ಬಾರಿ ಆತ ಗೂಗಲ್‌ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದಾನೆ. ಆದ್ರೆ ಪದೇ ಪದೇ ಆತನ ಅರ್ಜಿ ತಿರಸ್ಕೃತವಾಗುತ್ತಲೇ ಇತ್ತು. ಕೊನೆಗೂ 40ನೇ ಬಾರಿ ಟೈಲರ್ ಕೋಹೆನ್ ಅದೃಷ್ಟಶಾಲಿ ಎನಿಸಿಕೊಂಡಿದ್ದಾನೆ.
ಆತನಿಗೆ ಗೂಗಲ್‌ನಲ್ಲಿ ಉದ್ಯೋಗ ದೊರೆತಿದೆ. ಈ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಸ್ಕ್ರೀನ್ ಶಾಟ್ ಒಂದನ್ನು ಸಹ ಆತ ಶೇರ್ ಮಾಡಿದ್ದಾನೆ. ಗೂಗಲ್ ಆಫರ್ ಲೆಟರ್ ಸಿಕ್ಕಿರೋದ್ರಿಂದ ಸಖತ್ ಥ್ರಿಲ್ ಆಗಿದ್ದೇನೆ ಅಂತಾ ಬರೆದುಕೊಂಡಿದ್ದಾನೆ. ಜಾಲತಾಣದ ಮೂಲಕ ಹಲವರು ಟೈಲರ್‌ಗೆ ಶುಭಾಶಯ ಹೇಳಿದ್ದಾರೆ.