ಯಾವಾಗ್ಲೂ ವಸ್ತುಗಳ ಬೆಲೆ ನೋಡಬಾರದು, ಗುಣಮಟ್ಟ ನೋಡಿ ಖರೀದಿ ಮಾಡಬೇಕು. ಹೆಚ್ಚು ಬೆಲೆಯಿರುವ ವಸ್ತುಗಳು ಹೆಚ್ಚು ಗುಣಮಟ್ಟ ಹೊಂದಿವೆ ಎನ್ನಲೂ ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಂದು ವಸ್ತುಗಳ ಖರೀದಿ ಮೊದಲು ಅದ್ರ ಗುಣಮಟ್ಟದ ಬಗ್ಗೆ ಗಮನ ನೀಡಬೇಕಾಗುತ್ತದೆ. ಇಂಗ್ಲೆಂಡ್ ನಲ್ಲಿ ಕಡಿಮೆ ಗುಣಮಟ್ಟದ ಸೋಪ್, 4 ವರ್ಷದ ಹುಡುಗನೊಬ್ಬ ಆಸ್ಪತ್ರೆ ಸೇರುವಂತೆ ಮಾಡಿದೆ.
ಸಾಮಾನ್ಯವಾಗಿ ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚಿನ ಗಮನ ನೀಡ್ತಾರೆ. ಮಕ್ಕಳ ಚರ್ಮ ಸೂಕ್ಷ್ಮವಾಗಿರುವ ಕಾರಣ, ಗುಣಮಟ್ಟದಲ್ಲಿ ಯಾವುದೇ ರಾಜಿಯಾಗುವುದಿಲ್ಲ. ಆದ್ರೆ ಇಂಗ್ಲೆಂಡ್ ಕುಟುಂಬವೊಂದು ನಾಲ್ಕು ವರ್ಷದ ಬಾಲಕನಿಗೆ ಕಡಿಮೆ ಗುಣಮಟ್ಟದ ಸೋಪ್ ನಲ್ಲಿ ಸ್ನಾನ ಮಾಡಿಸಿದೆ.
ತಂದೆ, ಮಗನಿಗೆ ಸ್ನಾನ ಮಾಡಿಸಲು ಮುಂದಾಗಿದ್ದಾನೆ. ಬಾತ್ ರೂಮಿನಲ್ಲಿ ಸುಂದರ ಮೇಣದ ಬತ್ತಿಗಳನ್ನು ಹಚ್ಚಲಾಗಿತ್ತಂತೆ. ಬಾಲಕನ ಮುಖಕ್ಕೆ ಸೋಪ್ ಹಚ್ಚುತ್ತಿದ್ದಂತೆ ಮೇಣದ ಬತ್ತಿಯಲ್ಲಿದ್ದ ಬೆಂಕಿ, ಮುಖಕ್ಕೆ ಹತ್ತಿಕೊಂಡಿದೆ. ಬಾಲಕನ ಮುಖಕ್ಕೆ ಬೆಂಕಿ ಕಾಣಿಸ್ತಿದ್ದಂತೆ ತಂದೆ ನೀರು ಹಾಕಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆ ತಂದಿದ್ದಾನೆ. ವೈದ್ಯರು ಚಿಕಿತ್ಸೆ ನೀಡಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಸೋಪ್ ಕಂಪನಿ ವಿರುದ್ಧ ಪಾಲಕರು ದೂರು ನೀಡಲು ಮುಂದಾಗಿದ್ದಾರೆ.