ಅಗತ್ಯವಿದ್ದಾಗ ನಾವು ಇತರರಿಂದ ವಸ್ತುಗಳನ್ನು ಎರವಲು ಪಡೆಯುತ್ತೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೇರೆಯವರಿಂದ ವಸ್ತುಗಳನ್ನು ಎರವಲು ಪಡೆಯುವುದು ವಿನಾಶಕ್ಕೆ ಕಾರಣವಾಗುತ್ತದೆ. ಕೆಲವು ವಿಶೇಷ ವಸ್ತುಗಳನ್ನು ಉಚಿತವಾಗಿ ಪಡೆಯಬಾರದು. ಅವುಗಳಿಗೆ ಪ್ರತಿಯಾಗಿ ಹಣವನ್ನು ನೀಡಬೇಕು. ಹಾಗೆ ಮಾಡಲು ವಿಫಲವಾದರೆ ಅದೃಷ್ಟ ದುರಾದೃಷ್ಟವಾಗಿ ಬದಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಸಾಲ ಪಡೆಯಬಾರದು. ಹಾಗೆಯೇ ಯಾರಿಗೂ ಸಾಲ ನೀಡಬಾರದು. ಈ ದಿನ ನೀವು ಯಾರಿಗಾದ್ರೂ ಸಾಲ ನೀಡಿದ್ರೆ ಆ ಹಣ ವಾಪಸ್ ಬರುವುದಿಲ್ಲ. ನೀವು ಈ ದಿನ ಸಾಲ ಪಡೆದು, ಮರುಪಾವತಿಗೆ ಪ್ರಯತ್ನಿಸಿದ್ರೂ ತ್ವರಿತವಾಗಿ ಮರುಪಾವತಿ ಸಾಧ್ಯವಾಗುವುದಿಲ್ಲ. ಅಗತ್ಯವೆನ್ನಿಸಿದ್ರೆ ನೀವು ಸೋಮವಾರ, ಬುಧವಾರ, ಶುಕ್ರವಾರ ಅಥವಾ ಭಾನುವಾರ ಹಣವನ್ನು ಸಾಲ ನೀಡಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಎಂದೂ ಅಡುಗೆ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಎರವಲು ಪಡೆಯಬಾರದು, ಎರವಲು ನೀಡಬಾರದು. ಎಣ್ಣೆಗೆ ಪ್ರತಿಯಾಗಿ ನೀವು ಏನನ್ನಾದರೂ ನೀಡಬೇಕಾಗುತ್ತದೆ. ಉಚಿತವಾಗಿ ಎಣ್ಣೆ ಪಡೆದ್ರೆ ಸಮಸ್ಯೆ ಶುರುವಾಗುತ್ತದೆ. ಶನಿಯ ದೋಷಕ್ಕೆ ನೀವು ಒಳಗಾಗ್ತೀರಿ.
ಗ್ರಂಥಗಳಲ್ಲಿ ಉಪ್ಪನ್ನು ಶನಿಯ ಅಂಶವೆಂದು ಹೇಳಲಾಗುತ್ತದೆ. ಜೀವನದಲ್ಲಿ ಎಷ್ಟೇ ಅಗತ್ಯ ಬಂದರೂ ಉಪ್ಪನ್ನು ಸಾಲ ಮಾಡಬಾರದು. ಕೇವಲ ಒಂದು ರೂಪಾಯಿಯಾದರೂ ನೀಡಿ, ಉಪ್ಪು ಪಡೆಯಬೇಕು. ಉಪ್ಪನ್ನು ಉಚಿತವಾಗಿ ಅಥವಾ ಎರವಲು ತೆಗೆದುಕೊಳ್ಳುವುದರಿಂದ ಶನಿ ಕಾಟ ಶುರುವಾಗುತ್ತದೆ.
ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಕೂಡ ನೀವು ಎರವಲು ಪಡೆಯಬೇಡಿ. ಕೆಲಸಕ್ಕೆಂದು ಕೆಲ ಗಂಟೆ ಪಡೆಯಬಹುದು. ಆದ್ರೆ ದೀರ್ಘಕಾಲ ಇಟ್ಟುಕೊಳ್ಳಬಾರದು. ಇದ್ರಿಂದ ಸಾಲ ಹೆಚ್ಚಾಗುತ್ತದೆ.