ಫ್ರೆಂಚ್ ವಾಹನ ತಯಾರಕ ಕಂಪನಿ ರೆನಾಲ್ಟ್ ಭಾರತೀಯ ಮಾರುಕಟ್ಟೆಗೆ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ರೆನಾಲ್ಟ್ ಕಂಪನಿ 2024-25ರಲ್ಲಿ ಕ್ವಿಡ್ ಎಲೆಕ್ಟ್ರಿಕ್ ಅನ್ನು ಭಾರತಕ್ಕೆ ಪರಿಚಯಿಸಲಿದೆ. ಇದಲ್ಲದೇ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಇತರ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಸ್ಪರ್ಧಿಸಲು ಹೊಸ ಎಸ್‌ಯುವಿಯನ್ನು ಸಿದ್ಧಪಡಿಸುತ್ತಿದೆ, ಇದು ಮೂರನೇ ತಲೆಮಾರಿನ ರೆನಾಲ್ಟ್ ಡಸ್ಟರ್ ಆಗಿರಬಹುದು.
ಇದನ್ನು 2024 ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಹೊಸ ಕ್ವಿಡ್ ಇವಿ ಮತ್ತು ಡಸ್ಟರ್ ಮಾತ್ರವಲ್ಲದೆ, ರೆನಾಲ್ಟ್ ಈಗಾಗ್ಲೇ ಅಸ್ತಿತ್ವದಲ್ಲಿರುವ ಕ್ವಿಡ್, ಕಿಗರ್ ಮತ್ತು ಟ್ರೈಬರ್ ಅನ್ನು ಸಹ ನವೀಕರಿಸುತ್ತದೆ. ಗಮನಾರ್ಹವಾದ ವಿನ್ಯಾಸ ಬದಲಾವಣೆಗಳು ಮತ್ತು ನವೀಕರಿಸಿದ ಒಳಾಂಗಣಗಳಂತಹ ಬದಲಾವಣೆಗಳು ಎಲ್ಲಾ ಮೂರು ಮಾದರಿಗಳಲ್ಲಿ ಕಂಡುಬರುತ್ತವೆ. Renault Kwid, Kiger ಮತ್ತು Triber ನ ನವೀಕರಿಸಿದ ಆವೃತ್ತಿಗಳು 2024 ರಲ್ಲಿ ಬಿಡುಗಡೆಯಾಗಲಿವೆ.
ಕಂಪನಿಯು 6 ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ನೀಡಬಹುದಾದ್ದರಿಂದ ಹೊಸ ಮಾದರಿಯಲ್ಲಿ ಸುರಕ್ಷತೆಯ ಮಟ್ಟವನ್ನು ಸಹ ಹೆಚ್ಚಿಸಲಿದೆ. ಸದ್ಯ ರೆನಾಲ್ಟ್ ಕ್ವಿಡ್ ಬೆಲೆ 4.70 ಲಕ್ಷದಿಂದ 6.33 ಲಕ್ಷದವರೆಗೆ ಇದೆ. ಇದು 1.0-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. 68 PS ಪವರ್ ಮತ್ತು 91 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿ 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ AMT ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ.
ಇನ್ನು ರೆನಾಲ್ಟ್ ಕಿಗರ್‌ನ ಬೆಲೆ 6.50 ಲಕ್ಷದಿಂದ ಪ್ರಾರಂಭವಾಗಿ ಟಾಪ್ ಮಾಡೆಲ್ ಬೆಲೆ 11.23 ಲಕ್ಷದವರೆಗಿದೆ. ಕಿಗರ್ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 1.0-ಲೀಟರ್ ನೈಸರ್ಗಿಕವಾದ ಆಸ್ಪಿರೇಟೆಡ್ ಪೆಟ್ರೋಲ್ (72PS/96Nm) ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ (100PS/160Nm). ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್, 5 ಸ್ಪೀಡ್ AMT ಮತ್ತು CVT ಆಯ್ಕೆಯನ್ನು ಹೊಂದಿದೆ.
ರೆನಾಲ್ಟ್ ಟ್ರೈಬರ್ ಬೆಲೆ 6.33 ಲಕ್ಷದಿಂದ ಪ್ರಾರಂಭ. ಟಾಪ್ ಮಾಡೆಲ್ ಬೆಲೆ 8.97 ಲಕ್ಷ ರೂಪಾಯಿ ಇದೆ. ಟ್ರೈಬರ್ 1.0-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 72 PS ಪವರ್ ಮತ್ತು 96 Nm ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು AMT ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.