ರಾಜ್ ಕೋಟ್: ಐಷಾರಾಮಿ ಕಾರ್ ನಲ್ಲಿ ಪೆಟ್ರೋಲ್ ಬಂಕ್ ಗೆ ಬಂದಿದ್ದ ನಾಲ್ವರು ಡೀಸೆಲ್ ತುಂಬಿಸಿಕೊಂಡು ಪರಾರಿಯಾಗಿದ್ದಾರೆ.
ಡೀಸೆಲ್ ತುಂಬಿಸಿಕೊಂಡ ನಾಲ್ವರು ತಮ್ಮ ಬಳಿ 800 ರೂ. ಮಾತ್ರವಿದೆ ಎಂದು ಹೇಳಿದ್ದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಶುಕ್ರವಾರ ರಾತ್ರಿ ಗೊಂಡಾಲ್ ರಸ್ತೆಯ ಪಟೇಲ್ ಕನ್ಯಾ ಛತ್ರಾಲಯದಲ್ಲಿ ಘಟನೆ ನಡೆದಿದೆ. ಪರಾರಿಯಾದ ನಾಲ್ವರನ್ನು ಯಶ್ ಪಾಲ್ ಸಿನ್ಹಾ ಜಡೇಜಾ, ಲಕ್ಕಿರಾಜ್ ಸಿನ್ಹಾ, ಹಿಮಾಂಶು ಮತ್ತು ದಿಗ್ವಿಜಯ್ ಸಿನ್ಹಾ ಎಂದು ಗುರುತಿಸಲಾಗಿದೆ.
ಆರೋಪಿಗಳಲ್ಲಿ ಒಬ್ಬರು ಡೀಸೆಲ್ ಹಾಕಿಸಿಕೊಂಡು ತನ್ನ ಡೆಬಿಟ್ ಕಾರ್ಡ್ ಮೂಲಕ 4240 ರೂಪಾಯಿ ಪಾವತಿಸಲು ಮುಂದಾಗಿದ್ದಾನೆ. ಆದರೂ, ಕಾರ್ಡ್ ಮೂಲಕ ಪಾವತಿ ನಿರಾಕರಿಸಿದಾಗ 800 ರೂ. ಇದೆ ಎಂದು ಹೇಳಿದ್ದಾರೆ.ಬಂಕ್ ವ್ಯವಸ್ಥಾಪಕರು ಅವರೊಂದಿಗೆ ಮಾತನಾಡುತ್ತಿದ್ದಾಗಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರಿಗಾಗಿ ಕಾದು ಸಾಕಾದ ಬಂಕ್ ಸಿಬ್ಬಂದಿ ದೂರು ನೀಡಿದ್ದಾರೆ.