ನೋಯ್ಡಾ: ದಲಿತ ಮಹಿಳೆ ಮೇಲೆ ನಾಲ್ವರು ಪುರುಷರು ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಜೆವಾರ್ ನಲ್ಲಿ ನಡೆದಿದೆ.
ಆರೋಪಿಗಳು ಮಹಿಳೆಯನ್ನು ಹೊಲಕ್ಕೆ ಎಳೆದುಕೊಂಡು ಹೋಗಿ ಗನ್ ಪಾಯಿಂಟ್‌ನಲ್ಲಿ ಹಿಡಿದುಕೊಂಡು ಅತ್ಯಾಚಾರ ಎಸಗಿದ್ದಾರೆ. ಬುಧವಾರ ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬನನ್ನು ಮಹೇಂದ್ರ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಜೆವಾರ್ ನಲ್ಲಿರುವ ಆತನ ಹಳ್ಳಿಯ ಬಳಿ ಪೊಲೀಸರು, ವಿಶೇಷ ಕಾರ್ಯಾಚರಣೆ ತಂಡ ವಶಕ್ಕೆ ಪಡೆದುಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 376 ಡಿ(ಗ್ಯಾಂಗ್‌ರೇಪ್), 352 ಮತ್ತು 506 ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯಿದೆ, 1989 ರ ವಿಭಾಗಗಳನ್ನು ಎಫ್‌ಐಆರ್‌ಗೆ ಸೇರಿಸಲಾಗಿದೆ.
ಮಹೇಂದ್ರನ ವಿರುದ್ಧ ಹಿಂದೆ ಹಲವು ಪ್ರಕರಣ ದಾಖಲಾಗಿವೆ. ಈ ದೂರಿನಲ್ಲಿ ಹೆಸರಿಸಲಾದ ಏಕೈಕ ವ್ಯಕ್ತಿ ಆತ. ಸಂತ್ರಸ್ತೆಗೆ ತೋರಿಸಿದ ಚಿತ್ರದ ಮೂಲಕ ಆತನನ್ನು ಗುರುತಿಸಿದ ನಂತರ ಆರೋಪಿಯನ್ನು ಬಂಧಿಸಲಾಯಿತು.