ಅಕ್ರಮ ಸಂಬಂಧದ ಕಾರಣಕ್ಕೆ ದಂಪತಿ ಹಾಗೂ ಪ್ರಿಯಕರ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಚೆಂಗಲ್ಪಟ್ಟುವಿನ ಕೈಲಸಂದರ್ ನಿವಾಸಿಗಳಾದ ದಂಪತಿಗೆ 16 ವರ್ಷದ ಮಗಳಿದ್ದಾಳೆ. ಅವರ ಸಂಸಾರದಲ್ಲಿ ಆಟೋ ಚಾಲಕ ಸುರೇಶ್(44) ಎಂಟ್ರಿ ಕೊಟ್ಟಿದ್ದಾನೆ.
ಸುರೇಶ್ ಗೆ ಮದುವೆಯಾಗಿ ಮೂವರು ಹೆಣ್ಣುಮಕ್ಕಳಿದ್ದಾರೆ. ದಂಪತಿ ಮಾಂಸದ ಅಂಗಡಿ ನಡೆಸುತ್ತಿದ್ದರು. ಸುರೇಶ್ 35 ವರ್ಷದ ವಿವಾಹಿತೆಯೊಂದಿಗೆ ಸಂಬಂಧ ಬೆಳೆಸಿದ್ದು, 5 ವರ್ಷಗಳಿಂದ ನಡೆಯುತ್ತಿದ್ದ ಇವರ ಅಕ್ರಮ ಸಂಬಂಧದ ವಿಚಾರ ಪತಿಗೆ ಗೊತ್ತಾಗಿ ಪತ್ನಿಗೆ ಬುದ್ಧಿವಾದ ಹೇಳಿದ್ದಾನೆ.
ಶುಕ್ರವಾರ ಇದೇ ವಿಚಾರಕ್ಕೆ ಸುರೇಶ್ ಮತ್ತು ಮಹಿಳೆಯ ಗಂಡನ ನಡುವೆ ಗಲಾಟೆಯಾಗಿದ್ದು, ಶನಿವಾರ ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಮಹಿಳೆ ಮತ್ತು ಆಕೆಯ ಪತಿಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನ್ನನ್ನು ವಿಚಾರಣೆ ನಡೆಸುವ ಭಯದಲ್ಲಿ ಸುರೇಶ್ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಪತ್ನಿ ಮತ್ತು ಮೂವರು ಮಕ್ಕಳು, ದಂಪತಿಯ ಮಗಳು ಅನಾಥರಾಗಿದ್ದಾರೆ.