alex Certify BIG NEWS: ರಾಜ್ಯದಲ್ಲಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆಗೆ 4 ಕ್ಲಸ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆಗೆ 4 ಕ್ಲಸ್ಟರ್

ಬೆಂಗಳೂರು: ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಕಂಪನಿಗಳನ್ನು ಆಕರ್ಷಿಸಿ ಕಾರ್ಖಾನೆಗಳನ್ನು ಸ್ಥಾಪಿಸಲು 901 ಎಕರೆ ಒಳಗೊಂಡ ನಾಲ್ಕು ಕ್ಲಸ್ಟರ್ ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಹುಬ್ಬಳ್ಳಿ ಸಮೀಪ ಕೊಟ್ಟೂರು ಬೇಲೂರು ಬಳಿ 224 ಎಕರೆ, ಮೈಸೂರಿನ ಕೋಚನಹಳ್ಳಿ ಸಮೀಪ 245 ಎಕರೆ, ತುಮಕೂರು ಜಿಲ್ಲೆ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 218 ಎಕರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆದಿನಾರಾಯಣ ಹೊಸಹಳ್ಳಿ ಸಮೀಪ 213.14 ಎಕರೆ ಪ್ರದೇಶವನ್ನು ಸಿದ್ಧಪಡಿಸಲಾಗಿದ್ದು, 714.49 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಫಿಸಿಕ್ಸ್ ಮೋಟಾರ್ಸ್, ಕಾರ್ಬನ್ ಎಲೆಕ್ಟ್ರಾನಿಕ್ಸ್, ರವಿ ಸ್ಮಾಕ್, ಡಿಫೆನ್ಸ್, ನ್ಯಾನೋ ಫಿಕ್ಸ್, ನ್ಯೂರಿಗಾಮಿ, ವೈಡ್ ಮೊಬಿಲಿಟಿ ಸೇರಿದಂತೆ ಹಲವು ಕಂಪನಿಗಳು ಆಸಕ್ತಿ ತೋರಿಸಿವೆ. 2 ಕ್ಲಸ್ಟರ್ ಗಳ ಅಭಿವೃದ್ಧಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಶೇ. 50ರಷ್ಟು ವೆಚ್ಚ ಭರಿಸುತ್ತಿದೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...