ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಪೂರ್ವ ಆಫ್ರಿಕಾದ ಇಥಿಯೋಪಿಯಾದ ಜನರು ಎದುರಿಸುತ್ತಿದ್ದಾರೆ. ಅಲ್ಲಿ ಟಿಗ್ರೆಯ್ ಪ್ರಾಂತ್ಯದ ಮೂಲ ನಿವಾಸಿಗರಾಗರನ್ನು ಹತ್ತಿಕ್ಕಲು ಸೇನೆ ಬಿಟ್ಟಿರುವುದೇ ಈ ಸಮಸ್ಯೆ ತಲೆದೋರಲು ಕಾರಣ ಎನ್ನಲಾಗುತ್ತಿದೆ.
ಈ ಸಮಸ್ಯೆಯಿಂದಾಗಿ ಸದ್ಯ ಅಲ್ಲಿನ ಶೇ.40ರಷ್ಟು ಜನರು ಆಹಾರದಿಂದ ಪರಿತಪಿಸುತ್ತಿದ್ದಾರೆ. ಅಂದರೆ ಅಲ್ಲಿನ ಬರೋಬ್ಬರಿ 46 ಲಕ್ಷ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕೆಲವರು ಹಸಿವಿನಿಂದ ಸಾಯುವ ಹಂತಕ್ಕೂ ಬಂದಿದ್ದಾರೆ ಎನ್ನಲಾಗುತ್ತಿದೆ.
ಅಲ್ಲಿನ ಹಲವರು ತಮ್ಮ ಪ್ರಾಂತ್ಯಕ್ಕೆ ಪ್ರತ್ಯೇಕ ಚುನಾವಣೆ ನಡೆಸುವಂತೆ ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಅಲ್ಲಿಯ ಅಬಿ ಅಹ್ಮದ್ ಸರ್ಕಾರದಿಂದ ಹಲವರು ಹೊರ ಬರಲು ಪ್ರಯತ್ನಿಸುತ್ತಿದ್ದಾರೆ. ಸೇನಾ ಶಸ್ತ್ರಗಳನ್ನು ಕಳ್ಳತನ ಮಾಡಿ ತಮ್ಮದೇ ಪ್ರಾಂತ್ಯ ಸ್ಥಾಪಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆಯೂ ಸಾಕಷ್ಟು ಎದುರಾಗಿದೆ. ಅಲ್ಲಿ ಇಲ್ಲಿಯವರೆಗೂ ಸಂಗ್ರಹಿಸಿಟ್ಟಿದ್ದ ಆಹಾರ ಪದಾರ್ಥಗಳು ಕೂಡ ಖಾಲಿಯಾಗಿದ್ದು, ವಿದೇಶಿ ನೆರವಿಗಾಗಿ ಜನರು ಬಯಸುತ್ತಿದ್ದಾರೆ.
ಇಥಿಯೋಪಿಯಾ ರಾಷ್ಟ್ರದಲ್ಲಿ ಸಂಗ್ರಹಿಸಲಾದ ಆಹಾರ ಪದಾರ್ಥಗಳು, ಬೇಳೆ – ಕಾಳುಗಳ ಸಂಗ್ರಹ ಪೂರ್ಣ ಖಾಲಿಯಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ವಿದೇಶಿ ರಾಷ್ಟ್ರಗಳು ನೆರವಿಗೆ ಬಂದರೆ ಮಾತ್ರ ಜನರ ಬದುಕು ಸುಧಾರಿಸಲು ಸಾಧ್ಯ ಎಂದು ವಿಶ್ವ ಸಂಸ್ಥೆ ಅಭಿಪ್ರಾಯ ಪಟ್ಟಿದೆ.
ಇತರೆ ರಾಷ್ಟ್ರಗಳು ಬಂದು ದೊಡ್ಡ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ರಫ್ತು ಮಾಡಿದರೆ ಮಾತ್ರವೇ ಇಥಿಯೋಪಿಯಾದ ಜನರು ಬದುಕುಳಿಯಲಿದ್ದಾರೆ ಎಂದು ವಿಶ್ವ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಅಲ್ಲಿನ ವೈದ್ಯರು ಜನರಿಗಾಗಿ ಮರುಕಪಟ್ಟು, ಶ್ರೀಮಂತರ ಮನೆಯ ಎದುರು ಭಿಕ್ಷೆ ಬೇಡುತ್ತಿದ್ದಾರೆ ಎಂದು ವರದಿಯಾಗುತ್ತಿವೆ.