alex Certify 4 ವರ್ಷಗಳ ಬಳಿಕ ಕಮ್‌ ಬ್ಯಾಕ್‌ಗೆ ಶಾರುಖ್‌ ಸಜ್ಜು…! ವಿವಾದಗಳ ಬೆನ್ನಲ್ಲೇ ನಾಳೆ ಬಿಡುಗಡೆಯಾಗಲಿದೆ ʼಪಠಾಣ್ʼ ಚಿತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ವರ್ಷಗಳ ಬಳಿಕ ಕಮ್‌ ಬ್ಯಾಕ್‌ಗೆ ಶಾರುಖ್‌ ಸಜ್ಜು…! ವಿವಾದಗಳ ಬೆನ್ನಲ್ಲೇ ನಾಳೆ ಬಿಡುಗಡೆಯಾಗಲಿದೆ ʼಪಠಾಣ್ʼ ಚಿತ್ರ

Shah Rukh Khan lauds Deepika Padukone for Besharam Rang despite controversy  | Bollywood - Hindustan Times

ಬಾಲಿವುಡ್ ನಟ ಮತ್ತು ಸೂಪರ್‌ ಸ್ಟಾರ್ ಶಾರುಖ್ ಖಾನ್, ಪಠಾಣ್‌ ಚಿತ್ರದ ಮೂಲಕ ಕಮ್‌ ಬ್ಯಾಕ್‌ ಮಾಡಲು ಸಜ್ಜಾಗಿದ್ದಾರೆ. ಈ ಸಿನೆಮಾ ಬಿಡುಗಡೆಗೂ ಮುನ್ನವೇ ವಿವಾದಕ್ಕೀಡಾಗಿದ್ದು, ಸಾಕಷ್ಟು ಸುದ್ದಿ ಮಾಡಿದೆ.

ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶಾರುಖ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರಿಂದ ವಿವಾದ ಸ್ಫೋಟಗೊಂಡಿತ್ತು. ತೀವ್ರ ಪ್ರತಿಭಟನೆ ಬಳಿಕ ಹಾಡಿನಲ್ಲಿ ಬದಲಾವಣೆ ಮಾಡಲಾಗಿದೆ. ವಿಶ್ವ ಹಿಂದೂ ಪರಿಷತ್‌ನ ಗುಜರಾತ್ ಘಟಕ ಕೊನೆಗೂ ಪ್ರತಿಭಟನೆಯನ್ನು ಹಿಂಪಡೆದಿದೆ.

ಚಲನಚಿತ್ರದಿಂದ “ಆಕ್ಷೇಪಾರ್ಹ” ವಿಷಯಗಳನ್ನು ತೆಗೆದುಹಾಕಿದ್ದಕ್ಕಾಗಿ ತೃಪ್ತಿ ವ್ಯಕ್ತಪಡಿಸಿದೆ. ಜನವರಿ 25ರಂದು ಪಠಾಣ್‌ ಚಿತ್ರ ತೆರೆಗೆ ಅಪ್ಪಳಿಸಲಿದೆ. ಕಿಂಗ್‌ ಖಾನ್‌ ಅಭಿಮಾನಿಗಳು ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದರೆ, ನಾಲ್ಕು ವರ್ಷಗಳ ಬಳಿಕ ಕಮ್‌ ಬ್ಯಾಕ್‌ ಮಾಡ್ತಿರೋ ಶಾರುಖ್‌, ಸಿನೆಮಾದ ಯಶಸ್ಸಿಗಾಗಿ ಕಾಯ್ತಿದ್ದಾರೆ. ಯಶ್ ರಾಜ್ ಫಿಲಂಸ್‌ ನ “ಪಠಾಣ್‌” ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಶಾರುಖ್‌, ದೀಪಿಕಾ ಮತ್ತು ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿದ್ದಾರೆ.

ವರದಿಗಳ ಪ್ರಕಾರ ಚಿತ್ರದ ಕಥಾವಸ್ತುವು ದೇಶಭ್ರಷ್ಟ ರಾ ಫೀಲ್ಡ್ ಆಪರೇಟಿವ್ ಪಠಾಣ್‌ ಸುತ್ತ ಸುತ್ತುತ್ತದೆ. ನಾಲ್ಕು ವರ್ಷಗಳ ವಿರಾಮದ ನಂತರ ಶಾರುಖ್ ನಟಿಸಿರೋ ಮೊದಲ ಸಿನೆಮಾ ಇದು. ಕಳೆದ ಕೆಲ ವರ್ಷಗಳಿಂದ ಶಾರುಖ್‌ ಸಿನೆಮಾಗಳೆಲ್ಲ ಫ್ಲಾಪ್‌ ಆಗಿದ್ದವು. ಇದರ ಬೆನ್ನಲ್ಲೇ ಕಳೆದ ವರ್ಷ ಮಗ ಆರ್ಯನ್ ಖಾನ್‌ಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣವೂ ಬಾಲಿವುಡ್‌ ಬಾದ್‌ಶಾನನ್ನು ಮುಜುಗರಕ್ಕೀಡು ಮಾಡಿತ್ತು. ಚಿತ್ರದ ಮೇಲೆ ಶಾರುಖ್‌ಗೆ ಅಪಾರ ನಿರೀಕ್ಷೆಯಿದೆ.  ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಚಿತ್ರ 45 ರಿಂದ 50 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಅನ್ನೋದು ತಜ್ಞರ ಲೆಕ್ಕಾಚಾರ.

ಪಠಾಣ್‌ ಟ್ರೇಲರ್ ಯೂಟ್ಯೂಬ್‌ನಲ್ಲಿ 49 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಮೆರಿಕ, ದುಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಪಠಾಣ್‌ ಚಿತ್ರದ ಟಿಕೆಟ್‌ಗಳೂ ಭರ್ಜರಿ ಮಾರಾಟ ಕಾಣುತ್ತಿವೆ. ಬೇಷರಂ ರಂಗ್‌ ಚಿತ್ರದಲ್ಲಿ ಅಶ್ಲೀಲತೆಯಿದೆ ಎಂಬ ಕಾರಣಕ್ಕೆ ಚಿತ್ರವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೇ ಶುರುವಾಗಿತ್ತು.

ಅದಾದ ಬಳಿಕ ಹಾಡಿನಲ್ಲಿರುವ ಕೆಲವೊಂದು ಕ್ಲೋಸ್‌ಅಪ್‌ ಶಾಟ್‌ಗಳನ್ನು ತೆಗೆದುಹಾಕಲಾಗಿದೆ. ವರದಿಯ ಪ್ರಕಾರ ಹತ್ತು ಕಟ್‌ಗಳನ್ನು ಮಾಡಲಾಗಿದೆಯಂತೆ. ಚಿತ್ರದ ವಿರುದ್ಧ ವಿವಾದ ಮತ್ತು ಪ್ರತಿಭಟನೆಗೆ ಮೂಲವಾಗಿರುವ ಕೇಸರಿ ಉಡುಪನ್ನು ತೆಗೆದುಹಾಕಲಾಗಿದೆಯೇ ಅಥವಾ ಬದಲಾಯಿಸಲಾಗಿದೆಯೇ ಎಂಬುದು ಎಲ್ಲರಲ್ಲೂ ಇರುವ ಕುತೂಹಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...