
ಹೌದು, ಸ್ಯಾನ್ ಡಿಯಾಗೋ ಮೃಗಾಲಯದಲ್ಲಿ ಜನಿಸಿದ ಆರ್ಡ್ವರ್ಕ್ ಮರಿ ಆರೋಗ್ಯವಾಗಿದ್ದು, ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ವನ್ಯಜೀವಿ ತಜ್ಞರು ಹೇಳಿದ್ದಾರೆ. ಹೆಣ್ಣು ಮರಿಯು ಮೇ 10 ರಂದು ಜನಿಸಿದ್ದು, ಸುಮಾರು ಆರು ತಿಂಗಳ ಕಾಲ ತನ್ನ ತಾಯಿ ಝೋಲಾದಿಂದ ಶುಶ್ರೂಷೆಗೊಳಗಾಗಲಿದೆ ಎಂದು ಸ್ಯಾನ್ ಡಿಯಾಗೋ ಮೃಗಾಲಯದ ವನ್ಯಜೀವಿ ಒಕ್ಕೂಟ ತಿಳಿಸಿದೆ.
ಆರ್ಡ್ವರ್ಕ್ ಮರಿಯು ತುಂಬಾ ಕ್ರಿಯಾಶೀಲಳಾಗಿದ್ದು, ಅದು ಹುಟ್ಟಿದ ಕೆಲವೇ ಗಂಟೆಗಳ ನಂತರ ವಯಸ್ಕ ಆರ್ಡ್ವರ್ಕ್ನಂತೆ ಅಗೆಯಲು ತನ್ನ ಚೂಪಾದ ಉಗುರುಗಳನ್ನು ಬಳಸುತ್ತಿತ್ತು ಎಂದು ಪ್ರಮುಖ ವನ್ಯಜೀವಿ ಆರೈಕೆ ತಜ್ಞ ಕ್ಯಾರಿ ಇನ್ಸೆರಾ ತಿಳಿಸಿದ್ದಾರೆ.
ಉದ್ದನೆಯ ಕಿವಿಯ, ಕೂದಲು ರಹಿತ ಮರಿ ಕೇವಲ ಐದು ವಾರಗಳಲ್ಲಿ ತನ್ನ ಜನನದ ತೂಕವನ್ನು ಮೂರು ಪಟ್ಟು ಹೆಚ್ಚಿಸಿದೆ. ಆರ್ಡ್ವರ್ಕ್ ಮರಿಗೆ ಇನ್ನೂ ಕೂಡ ಹೆಸರಿಟ್ಟಿಲ್ಲ. ತನ್ನ ತಾಯಿಯೊಂದಿಗೆ ಬಾಂಧವ್ಯ ಹೊಂದಿರುವುದರಿಂದ ಸುಮಾರು ಎರಡು ತಿಂಗಳ ಕಾಲ ಮೃಗಾಲಯದ ಸಂದರ್ಶಕರಿಂದ ದೂರ ಉಳಿಸಲಾಗುತ್ತದೆ.
ಆರ್ಡ್ವರ್ಕ್ಗಳು ಉಪ-ಸಹಾರನ್ ಎಂಬ ಆಫ್ರಿಕಾಕ್ಕೆ ಸ್ಥಳೀಯವಾಗಿರುವ ಜೀವಿಯಾಗಿದೆ. ಅವುಗಳು ಬಲವಾದ ಮುಂಭಾಗದ ಕಾಲುಗಳನ್ನು ಹೊಂದಿದ್ದು, ಬಿಲಗಳನ್ನು ಅಗೆಯಲು ಉದ್ದನೆಯ ಉಗುರುಗಳನ್ನು ಹೊಂದಿವೆ. ಇವುಗಳು ಇರುವೆಗಳು ಮತ್ತು ಗೆದ್ದಲುಗಳನ್ನು ಕೆಣಕಲು ತಮ್ಮ ಉದ್ದವಾದ, ಜಿಗುಟಾದ ನಾಲಿಗೆಯನ್ನು ಬಳಸುತ್ತವೆ.
ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿ ನೆಟ್ಟಿಗರು ಇಷ್ಟಪಟ್ಟಿದ್ದಾರೆ.