‘ಹುರೂನ್ ಇಂಡಿಯಾ’ ದೇಶದ ಅತಿ ಸಿರಿವಂತರ ಪಟ್ಟಿ ಬಿಡುಗಡೆ ಮಾಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಇವರ ಆಸ್ತಿ ಮೌಲ್ಯ 8.08 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇನ್ನು ಎರಡನೇ ಸ್ಥಾನದಲ್ಲಿರುವ ಗೌತಮ್ ಅದಾನಿಯವರ ಆಸ್ತಿ ಮೌಲ್ಯ 4.74 ಲಕ್ಷ ಕೋಟಿ ರೂಪಾಯಿಗಳಾಗಿದೆ. ಮೂರನೇ ಸ್ಥಾನದಲ್ಲಿರುವ ಸೈರಸ್ ಪೂನಾವಾಲ 2.78 ಲಕ್ಷ ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ.
ಇನ್ನು ಅತಿ ಸಿರಿವಂತರು ನೆಲೆಸಿರುವ ನಗರಗಳ ಪಟ್ಟಿಯಲ್ಲಿ ವಾಣಿಜ್ಯ ನಗರಿ ಮುಂಬೈ ಮೊದಲ ಸ್ಥಾನದಲ್ಲಿದ್ದು, ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಸಂಪತ್ತು ಹೊಂದಿರುವ 328 ಸಿರಿವಂತರಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿ ಎರಡನೇ ಸ್ಥಾನದಲ್ಲಿದ್ದು, ಇಲ್ಲಿ 199 ಮಂದಿ ಸಿರಿವಂತರು ನೆಲೆಸಿದ್ದಾರೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರು ಮೂರನೇ ಸ್ಥಾನದಲ್ಲಿದ್ದು, ಇಲ್ಲಿ ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಸಂಪತ್ತು ಹೊಂದಿರುವ ನೂರು ಮಂದಿ ವಾಸವಾಗಿದ್ದಾರೆ.
ಬೆಂಗಳೂರಿನಲ್ಲಿರುವ ನೂರು ಸಿರಿವಂತರ ಲಿಸ್ಟ್ ನಲ್ಲಿ ಟಾಪ್ 10 ಸಿರಿವಂತರ ಪಟ್ಟಿ ವಿವರ ಇಲ್ಲಿದೆ.
ಅರ್ಜುನ್ ಮೆಂಡಾ ಮತ್ತು ಕುಟುಂಬ
ನಿತಿನ್ ಕಾಮತ್ ಮತ್ತು ಕುಟುಂಬ
ಎಸ್ ಗೋಪಾಲಕೃಷ್ಣನ್ ಮತ್ತು ಕುಟುಂಬ
ಅಜೀಮ್ ಪ್ರೇಮ್ ಜಿ ಮತ್ತು ಕುಟುಂಬ
ನಾರಾಯಣ ಮೂರ್ತಿ ಮತ್ತು ಕುಟುಂಬ.
ರಂಜನ್ ಪೈ
ನಿಖಿಲ್ ಕಾಮತ್
ಜಿತೇಂದ್ರ ವೀರ್ವಾನಿ
ರಾಜ ಬಾಗ್ಮನೆ
ಕಿರಣ್ ಮಜಮ್ದಾರ್ ಶಾ.