ಗದಗ : ಗದಗ ‘ಜಿಮ್ಸ್’ ಆಸ್ಪತ್ರೆಯಲ್ಲಿ ‘ರೀಲ್ಸ್’ ಮಾಡಿದ 38 ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಹೌದು, ಜಿಲ್ಲಾಸ್ಪತ್ರೆಯ ಕಾರಿಡಾರ್ನಲ್ಲಿ ಸಿನಿಮಾದ ಹಾಡಿಗೆ ನೃತ್ಯ ಮಾಡಿದ ವಿಡಿಯೋ ವೈರಲ್ ಆಗಿತ್ತು. ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 38 ವೈದ್ಯಕೀಯ ವಿದ್ಯಾರ್ಥಿಗಳನ್ನು ಜೀಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಅಮಾನತು ಮಾಡಿದ್ದಾರೆ.
ಆಸ್ಪತ್ರೆಯ ಕರ್ತವ್ಯದ ಸಮಯದಲ್ಲಿಯೇ ರೀಲ್ಸ್ ಮಾಡಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ರೀಲ್ಸ್ ಮಾಡೋಕೆ ಬೇರೆ ಜಾಗ ಸಿಗಲಿಲ್ವಾ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ರೀಲ್ಸ್ ಮಾಡಿರುವ ಎಲ್ಲರೂ ಎಂಬಿಬಿಎಸ್ ಇಂಟರ್ನ್ಶಿಪ್ ವಿದ್ಯಾರ್ಥಿಗಳು. ಅವರನ್ನು 10 ದಿನಗಳ ಕಾಲ ಅಮಾನತು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಈ ರೀತಿ ಮಾಡಿರುವುದು ದೊಡ್ಡ ಅಪರಾಧ, ವಿಡಿಯೋ ಮಾಡುವುದಕ್ಕೆ ನಾವು ಅನುಮತಿ ನೀಡಿಲ್ಲ ಎಂದು ಜೀಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಹೇಳಿದ್ದಾರೆ.