ಕೇವಲ 400 ಜನ ಕೈದಿಗಳನ್ನಿಡುವ ಸಾಮರ್ಥ್ಯ ಹೊಂದಿರುವ ಜೈಲಿನಲ್ಲಿ 1,539 ಜನರನ್ನು ತುಂಬಲಾಗಿತ್ತು. ಆದರೆ, ಈ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 38 ಜನ ಕೈದಿಗಳು ಸಜೀವವಾಗಿ ದಹನವಾಗಿದ್ದು, 69 ಜನರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಪೂರ್ವ ಮಧ್ಯ ಆಫ್ರಿಕಾದ ಬುರುಂಡಿ ದೇಶದ ಗಿಟೆಗಾದಲ್ಲಿ ನಡೆದಿದೆ.
ಗಿಟೆಗಾ ಬುರುಂಡಿ ದೇಶದ ರಾಜಧಾನಿಯಾಗಿದೆ. ಬೆಂಕಿ ತಗುಲಿದ ಪರಿಣಾಮ ಹಲವರು ಸಾವನ್ನಪ್ಪಿದ್ದಾರೆ. ಅಲ್ಲಿ ಹೆಚ್ಚಿನ ಸಂಖ್ಯೆಯ ಕೈದಿಗಳನ್ನು ಇಡಲಾಗಿತ್ತು ಎಂದು ಅಲ್ಲಿನ ಉಪಾಧ್ಯಕ್ಷ ಪ್ರಾಸ್ಟರ್ಬಜೊಂಬಾಂಜಾ ಸುದ್ದಿಗಾರರಿಗೆ ಹೇಳಿದ್ದಾರೆ.
ಸದ್ಯ ಜೈಲಿನಲ್ಲಿ ರಾಶಿರಾಶಿಯ ರೀತಿಯಲ್ಲಿ ಹೆಣಗಳು ಬಿದ್ದಿವೆ. ಘಟನೆಯಲ್ಲಿ ಸದ್ಯ ಶೇ. 90ರಷ್ಟು ಕೈದಿಗಳು ಮಲಗುವ ಕೋಣೆಗಳು ಬೆಂಕಿಗೆ ಆಹುತಿಯಾಗಿವೆ. ಇದು ದೊಡ್ಡ ದುರಂತ ಎಂದು ಅಲ್ಲಿನ ಕೈದಿಯೊಬ್ಬ ಬಿಬಿಸಿಗೆ ಮಾಹಿತಿ ನೀಡಿದ್ದಾನೆ.
ಸದ್ಯ ಅಲ್ಲಿನ ಸಿಬ್ಬಂದಿ ಜೈಲಿನೊಳಗೆ ತೆರಳಿ ಕೈದಿಗಳನ್ನು ಹೊರ ತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ.