alex Certify ಹೊಸ ವರ್ಷಕ್ಕೆ ಮತ್ತಷ್ಟು ಇಮೋಜಿಗಳ ಸೇರ್ಪಡೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಮತ್ತಷ್ಟು ಇಮೋಜಿಗಳ ಸೇರ್ಪಡೆ…!

ಮೊದಲೆಲ್ಲಾ ಪತ್ರ ಬರೆಯುತ್ತಿದ್ದ ನಾವು, ಟೆಕ್ನಾಲಜಿಯ ಜೊತೆ ಬೆಳೆಯುತ್ತಾ ಕೋಟ್ಯಾಂತರ ಆವಿಷ್ಕಾರಗಳಿಗೆ ಸಾಕ್ಷಿಯಾಗಿದ್ದೇವೆ. ಅದ್ರಲ್ಲೂ ಫೋನ್ ನಲ್ಲಿ ಸಂದೇಶ ಕಳಿಸುವಾಗ, ಟೆಕ್ಸ್ಟ್ ಜೊತೆ ಇಮೋಜಿ ಕಳಿಸೋದು ನಮ್ಮ ಭಾವನೆ ವ್ಯಕ್ತಪಡಿಸುವ ಮಾರ್ಗ.‌ 90ರ ದಶಕದಿಂದಲೂ ಮಾನವ ಜೀವನದ ಅವಿಭಾಜ್ಯ ಅಂಗವಾಗಿರುವ ಇಮೋಜಿಗಳ ಸಾಲಿಗೆ ಪ್ರತಿ ವರ್ಷ ಹೊಸ ಇಮೋಜಿಗಳನ್ನ ಸೇರಿಸಲಾಗುತ್ತದೆ. ಈ ವರ್ಷವೂ ಈ ಪದ್ಧತಿ ಮುಂದುವರೆದಿದದ್ದು 37 ಹೊಸ ಇಮೋಜಿಗಳನ್ನ ಪರಿಚಯಿಸಲಾಗ್ತಿದೆ.

ಮತಾಂತರ ನಿಷೇಧ ಬದಲು ಪಕ್ಷಾಂತರ ನಿಷೇಧ ಜಾರಿಗೆ ತನ್ನಿ: ಸಿ.ಎಂ. ಇಬ್ರಾಹಿಂ ಆಗ್ರಹ

ಇಮೋಜಿಗಳನ್ನ ಸೆಲೆಕ್ಟ್ ಮಾಡುವುದು ಹೇಗೆ..?

ಯುನಿಕೋಡ್ ಕನ್ಸೋರ್ಟಿಯಮ್ ಎನ್ನುವ ಸಂಸ್ಥೆ ಇಮೋಜಿಗಳನ್ನ ಡೆವಲಪ್ ಮಾಡುತ್ತದೆ. ಈ ಸಂಸ್ಥೆಯೇ ಯಾವ ಇಮೋಜಿಗಳು ಇರಬೇಕು ಅಥವಾ ತೆಗೆಯಬೇಕು ಎಂದು ನಿರ್ಧರಿಸುತ್ತದೆ. ಸಧ್ಯದ ಪರಿಸ್ಥಿತಿ, ಕಾಲಘಟ್ಟಕ್ಕೆ ಹೊಂದುವ ಇಮೋಜಿಗಳನ್ನ ಪರಿಚಯಿಸಲಾಗುತ್ತದೆ. ವೈಶಿಷ್ಟತೆ ಹಾಗೂ ಹೀಗಿನ ಜನರಿಗೆ ಹೊಂದಾಣಿಕೆಯಾಗುವಂತೆ ಇಮೋಜಿಗಳನ್ನ ಆರಿಸಲಾಗುತ್ತದೆ. ಸ್ಮಾರ್ಟ್ ಫೋನ್ ಬಳಸುವ ನಾವುಗಳು ಸಹ ನಮ್ಮಿಷ್ಟದ ಹೊಸ ಇಮೋಜಿಗೆ ಪ್ರಸ್ತಾವನೆ ಸಲ್ಲಿಸಬಹುದು, ಆದರೆ ಇಮೋಜಿ ಸೆಲೆಕ್ಷನ್ ಮಾನದಂಡಗಳು ಕಠಿಣ ಎಂಬುದು ಕಟುಸತ್ಯ.

ಯುನಿಕೋಡ್ ಕನ್ಸೋರ್ಟಿಯಮ್ ಈಗಾಗ್ಲೇ ನವ ಇಮೋಜಿಗಳನ್ನ ವಿಶ್ವಕ್ಕೆ ಪರಿಚಯಿಸಿದೆ. 2022 ರ 14.0 ಯುನಿಕೋಡ್ ಅಪ್ಡೇಟ್ ಮೂಲಕ ಎಲ್ಲಾ ಪ್ಲಾಟ್ ಫಾರ್ಮ್ ನಲ್ಲೂ ಹೊಸ ಇಮೋಜಿಗಳು ನಮ್ಮ ಕೈಸೇರಲಿವೆ. ಕರಗುವ ಮುಖ, ಇಣುಕುವ ಕಣ್ಣಿನ ಮುಖ, ಮುಖ್ಯವಾಗಿ ಪ್ರೆಗ್ನೆಂಟ್ ಮ್ಯಾನ್ ಇಮೋಜಿ ಎಲ್ಲರ ಗಮನ ಸೆಳೆಯುತ್ತಿದೆ. 75 ಚರ್ಮದ ಬಣ್ಣಗಳಲ್ಲಿ 37 ಇಮೋಜಿಗಳು ಹೊಸ ಲೋಕದ ಹೊಸ ಭಾವನೆಗಳಾಗಿ ಹೊರಹೊಮ್ಮುತ್ತಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...